ಕಾಂಗ್ರೆಸ್‌ಗೆ ಬಗಲ್ ಮೇ ದುಷ್ಮನ್…!

0
20
ಬಗಲ್‌

ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರನ್ನು ಕರೆದುಕೊಂಡು ಬರುವ ಬಗ್ಗೆ ಶಾಸಕಿ ಹೆಬ್ಬಾಳಕರಗೆ ಹೇಳಿದ ಮಾತುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಇದರಿಂದ ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಕೆಲ ನಾಯಕರಿಗೆ ಬಗಲ್ ಮೇ ದುಷ್ಮನ್ ಇದ್ದಾರೆ ಎನ್ನುವುದು ಸ್ಪಷ್ಟವಾಗುತ್ತಿದೆ.
ಸಿದ್ದರಾಮಯ್ಯವರು ಈ ಮಾತನ್ನು ಬಹಿರಂಗ ಸಮಾವೇಶದಲ್ಲೋ ಅಥವಾ ಹತ್ತಾರು ಜನರ ಜನರ ಸಮ್ಮುಖದಲ್ಲಿ ಹೇಳಿದ್ದರೆ ಆಗದವರು ಇದನ್ನು ವೈರಲ್ ಮಾಡಿರಬಹುದು. ಅಥವಾ ಪತ್ರಕರ್ತರ ಸಮ್ಮುಖದಲ್ಲಿ ಪಕ್ಕದವರ ಕಿವಿಯಲ್ಲಿ ಮಾತನಾಡುವಾಗ ಹೇಳುತ್ತಿದ್ದಾಗ ಮಾಧ್ಯಮದವರು ರಿಕಾರ್ಡ್ ಮಾಡಿ ವೈರಲ್ ಮಾಡಿರಬಹುದು ಅಂದುಕೊಳ್ಳಬಹುದಿತ್ತು. ಆದರೆ, ಇಲ್ಲಿ ಈ ರೀತಿಯ ಚರ್ಚೆಯಾಗಿದ್ದು `ಪ್ರಜಾಧ್ವನಿ’ ಬಸ್‌ನಲ್ಲಿ ಹೋಗುತ್ತಿರುವಾಗ ಎನ್ನುವುದು ಉಲ್ಲೇಖನೀಯ.
ಈ ಸಂದರ್ಭದಲ್ಲಿ ನಾಯಕರನ್ನು ಬಿಟ್ಟರೆ ಮತ್ಯಾರಿದ್ದರು ಎನ್ನುವುದು ಚರ್ಚೆಯ ವಸ್ತುವಾಗಿದೆ. ಹೀಗಾಗಿ ಬಸ್‌ನಲ್ಲಿದ್ದವರೇ ಒಬ್ಬರು ಸಿದ್ದರಾಮಯ್ಯನವರಿಗೆ ಅಥವಾ ಹೆಬ್ಬಾಳಕರಗೆ ಆಗದವರು ರಿಕಾರ್ಡ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹರಿಬಿಟ್ಟಿರಬಹುದು ಎನ್ನಲಾಗುತ್ತಿದೆ.

Previous articleಮಂತ್ರಾಲಯದ ಶ್ರೀರಾಯರ ಕಾಣಿಕೆ ಹುಂಡಿಯಲ್ಲಿ 2.90 ಕೋಟಿ ರೂ. ಹಣ ಸಂಗ್ರಹ
Next article40ಲಕ್ಷ ಲಂಚ: ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಶಾಸಕರ ಪುತ್ರ