ಕಾಂಗ್ರೆಸ್‌ಗೆ ಅಕ್ಕಿ ಕೊಡಲು ಆಗ್ತಿಲ್ಲ

0
35

ಧಾರವಾಡ: ಕಾಂಗ್ರೆಸ್ ಪಕ್ಷಕ್ಕೆ ಅಕ್ಕಿ ಕೊಡಲು ಆಗುತ್ತಿಲ್ಲ. ಅದಕ್ಕಾಗಿ ಬಿಜೆಪಿಯತ್ತ ಕಾಂಗ್ರೆಸ್ ಬೊಟ್ಟು ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ತಿಂಗಳಾಯಿತು. ಈ ವರೆಗೆ ಒಂದು ಕೆಜಿ ಅಕ್ಕಿ ನೀಡಿಲ್ಲ. ಈಗ ನೀಡುತ್ತಿರುವ ೫ ಕೆಜಿ ಅಕ್ಕಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ್ದು. ನ್ಯಾಷನಲ್‌ ಫುಡ್ ಸೆಕ್ಯುರಿಟಿ ಆಕ್ಟ್ ಅಡಿ ನೀಡಲಾಗುತ್ತಿದೆ ಎಂದರು.
ಈ ಹಿಂದೆ ಕಾಂಗ್ರೆಸ್ ಕಾಯ್ದೆ ಜಾರಿ ಮಾಡಿದ್ದರೂ ಅದಕ್ಕೆ ಹಣ ಮೀಸಲಿರಿಸಿದ್ದಿಲ್ಲ. ೮೦ ಕೋಟಿ ಜನರಿಗೆ ಕನಿಷ್ಠ ದರದಲ್ಲಿ ಅಕ್ಕಿ ಕೊಡಬೇಕಾಗುತ್ತದೆ. ಇದು ಕೇಂದ್ರ ಸರಕಾರದ ಜವಾಬ್ದಾರಿ. ಹಾಗಾಗಿ ಕೊಡುತ್ತಿದೆ. ರಾಜ್ಯ ಸರಕಾರ ಎಫಸಿಐದವರು ಕೊಟ್ಟರೆ ಕೊಡುತ್ತೇವೆ ಎಂದು ಹೇಳಿಲ್ಲ. ೧೦ಕೆಜಿ ಅಂತಾ ಹೇಳಿದ್ದಾರೆ. ಹಾಗಾಗಿ ಕೇಂದ್ರದ ೫ಕೆಜಿ ಬಿಟ್ಟು ರಾಜ್ಯ ಸರಕಾರ ೧೦ ಕೆಜಿ ಕೊಡಬೇಕು. ಬಡವರ ವೋಟ್ ಬ್ಯಾಂಕ್ ಮಾಡಿಕೊಂಡರೆ ಸಾಲದು. ಅವರಿಗೆ ನೀಡಿದ ಭರವಸೆ ಕೊಡಬೇಕು. ಬಿಜೆಪಿ ಬಡವರ ಕಲ್ಯಾಣ ಮಾಡುತ್ತಿದೆ ಎಂದರು.

Previous articleಅನ್ನ ಭಾಗ್ಯ ಯೋಜನೆಗೆ ಜಾರಿಯಾಗದಂತೆ ಕೇಂದ್ರ ಷಡ್ಯಂತ್ರ
Next articleಶ್ರೀ ಭುವನೇಶ್ವರಿ ರಥಕ್ಕೆ ವಿಶೇಷ ಪೂಜೆ