ಒಂದು ದೇಶ, ಉಚಿತ ಶಿಕ್ಷಣ: ಪ್ರಧಾನಿಗೆ ಲಾಡ್‌ ಸಲಹೆ

0
16

ಹುಬ್ಬಳ್ಳಿ: ದೇಶದ ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣದಂತಹ ಜನೋಪಯೋಗಿ ಮಂತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರ ಪ್ರಚಾರ ತಂಡದವರು ಹೇಳಿಕೊಡಬೇಕು ಎಂದು ಸಚಿವ ಸಂತೋಷ ಲಾಡ್‌ ಹೇಳಿದ್ದಾರೆ.
‘ಒಂದು ದೇಶ, ಒಂದು ಚುನಾವಣೆ’ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು, ಒಂದು ದೇಶ, ಒಂದು ಚುನಾವಣೆ ಬಿಟ್ಟು ʼಒಂದು ದೇಶ, ಉಚಿತ ಶಿಕ್ಷಣʼ ಯೋಜನೆಗೆ ಪ್ರಧಾನಿ ಮುಂದಾಗಲಿ ಎಂದು ಸಲಹೆ ನೀಡಿದ್ದಾರೆ. ಕಳೆದ 10 ವರ್ಷಗಳಿಂದ ಶಿಕ್ಷಣ ದುಬಾರಿಯಾಗಿದೆ. ಮಧ್ಯಮ ಕುಟುಂಬ ಮಕ್ಕಳು ಕೂಡ ಶಿಕ್ಷಣಕ್ಕಾಗಿ ಪರದಾಡಬೇಕಾಗಿದೆ ಎಂದ ಅವರು, ‘ಒಂದು ದೇಶ, ಒಂದು ಚುನಾವಣೆ’ ವಿಚಾರ ಬಿಟ್ಟು ʼಒಂದು ದೇಶ, ಉಚಿತ ಶಿಕ್ಷಣʼಕ್ಕೆ ಮುಂದಾಗಲಿ ಎಂದು ಹೇಳಿದ್ದಾರೆ.

Previous articleಸನಾತನ ಧರ್ಮವನ್ನು ರೋಗಕ್ಕೆ ಹೋಲಿಕೆ ಮಾಡುವುದೇ ರೋಗ
Next articleಅಪಘಾತ: ಇಬ್ಬರು ಸಾವು