ಎತ್ತಿನ ಗಾಡಿ ಸ್ಪರ್ಧೆಯಲ್ಲಿ ನೊಗ ಬಡಿದು ಯುವಕನ ಸಾವು

0
13
ಸಾವು

ಚಿಕ್ಕಮಗಳೂರು: ಎತ್ತಿನ‌ಗಾಡಿ ಸ್ಪರ್ಧೆಯಲ್ಲಿ ನೊಗ ಬಡಿದು ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.
ಮೃತ ಪಟ್ಟ ವ್ಯಕ್ತಿಯನ್ನು ಅಜ್ಜಂಪುರ ಮೂಲದ ಭರತ್ (25) ಗುರುತಿಸಲಾಗಿದ್ದು, ಅಜ್ಜಂಪುರದಲ್ಲಿ ನಡೆಯುತ್ತಿದ್ದ ಜೋಡಿ ಎತ್ತಿನ ಗಾಡಿ ಸ್ಪರ್ಧೆಯ ಕೊನೆಯಲ್ಲಿ ಎತ್ತುಗಳ ನೊಗ ಹಿಡಿದು ನಿಲ್ಲಿಸಲು ಮುಂದಾದಾಗ ಈ ಘಟನೆ ಸಂಭವಿಸಿದೆ. ಫೈನಲ್ ಸುತ್ತಿನ ಅಂತಿಮ ಸ್ಪರ್ಧೆಯಲ್ಲಿ ನೊಗ ಹಿಡಿಯಲು ಹೋಗಿದ್ದ ಭರತ್ ಗೆ ವೇಗವಾಗಿದ್ದ ಎತ್ತಿನ ಗಾಡಿಯ ನೊಗ ತಲೆಗೆ ಹೊಡೆದು ಸಾವನಪ್ಪಿದ್ದಾರೆ.

Previous articleದುಬೈನಲ್ಲೂ ನಂದಿನಿ ಹವಾ
Next articleಮರುಳಾದರೆ ಭಾರತದ ಸಾಮಾಜಿಕ, ರಾಜಕೀಯ, ಆರ್ಥಿಕ ಬೆಸುಗೆ ನಾಶ