ಈದ್ ಮೆರವಣೆಗೆ ಪುಂಡಾಟಿಕೆ: ನೋಟೀಸ್ ಜಾರಿ

0
24


ಮಂಗಳೂರು: ಈದ್ ಮಿಲಾದ್ ಮೆರವಣಿಗೆಯಲ್ಲಿ ಕೆಲ ಯುವಕರು ಪುಂಡಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು, ಪುಂಡಾಟ ಮಾಡಿದ ಯುವಕರಿಗೆ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ.
ಸೆ.೨೮ರ ಈದ್ ಮಿಲಾದ್ ಮೆರವಣಿಗೆ ವೇಳೆ ಮಂಗಳೂರಿನ ಉಳ್ಳಾಲ ಅಬ್ಬಕ್ಕ ವೃತ್ತದ ಬಳಿ ಘಟನೆ ನಡೆದಿತ್ತು. ವೀರರಾಣಿ ಅಬ್ಬಕ್ಕ ಸರ್ಕಲ್ ಹತ್ತಿ ಯುವಕರು ಪುಂಡಾಟ ಮಾಡಿದ್ದರು. ಇದರ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಶಿವಮೊಗ್ಗದ ಈದ್ ಮೆರವಣಿಗೆ ಸಂದರ್ಭದ ಘಟನೆ ಗಂಭೀರವಾಗಿರುವ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ನೂರಾರು ಯುವಕರು ಅಬ್ಬಕ್ಕ ಸರ್ಕಲ್ ಹತ್ತಿ ಪ್ರತಿಮೆ ಎದುರು ಕುಣಿದಾಡಿದ್ದರಲ್ಲದೆ, ರಸ್ತೆ ಬಂದ್ ಮಾಡಿ ಬೈಕ್ ಹಾರ್ನ್ ಹಾಕಿಕೊಂಡು ಹುಚ್ಚಾಟ ನಡೆಸಿದ್ದರು. ಸದ್ಯ ವಿಡಿಯೋ ಆಧರಿಸಿ ಪೊಲೀಸರು ಯುವಕರನ್ನು ಪತ್ತೆ ಹಚ್ಚಿದ್ದಾರೆ. ಮಂಜನಾಡಿ, ಮದಕ, ಬಂಟ್ವಾಳ, ಬೆಳ್ತಂಗಡಿ, ದೇರಳಕಟ್ಟೆ, ಕೊಣಾಜೆ ಹಾಗೂ ಉಳ್ಳಾಲ ಭಾಗದ ಈ ಯುವಕರಿಗೆ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಲಾಗಿದೆ. ಉಳ್ಳಾಲ ಪೊಲೀಸ್ ಠಾಣಾಧಿಕಾರಿಯಿಂದ ನೋಟೀಸ್ ಜಾರಿಯಾಗಿದೆ.

Previous articleಕಾಡು ಹಣ್ಣಿನ ರಸ ಕುಡಿದು ಮಹಿಳೆ ಸಾವು
Next articleವೈಜ್ಞಾನಿಕವಾಗಿ ಜಾತಿ ಗಣತಿ ಆಗಬೇಕು