ಇಲಾಖೆ ಅನುಮತಿ ಪಡೆಯದೇ ಸ್ಮಾರ್ಟ್ ಕಾಮಗಾರಿ ನಡೆಸಿತಾ?

0
26

ಬೆಳಗಾವಿ: ಬೆಳಗಾವಿ ನಗರದ ವ್ಯಾಕ್ಸಿನ್ ಡಿಪೋದಲ್ಲಿ ಅಕ್ರಮ ಕಾಮಗಾರಿ ಆರೋಪ ಕೇಳಿಬಂದಿದ್ದು, ಸ್ಮಾರ್ಟ್ ಸಿಟಿ ಎಂಡಿ ವಿರುದ್ಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಡಿಎಚ್‌ಒ(DHO) ಡಾ.ಮಹೇಶ್ ಕೋಣಿ ಕೇಸ್ ದಾಖಲಿಸಿದ್ದಾರೆ. ಡಿಎಚ್ ಓ ಡಾ. ಮಹೇಶ್ ಕೋಣಿಯಿಂದ ಟಿಳಕವಾಡಿ ಠಾಣೆಗೆ ಲಿಖಿತ ದೂರು ದಾಖಲು, ಪರವಾನಿಗೆ ಇಲ್ಲದೇ ತಮ್ಮ ಕಚೇರಿ ಆವರಣದಲ್ಲಿನ ಜಾಗದಲ್ಲಿ ಅಕ್ರಮ ಕಾಮಗಾರಿ ಮಾಡಿದ್ದಾರೆ. ಮಣ್ಣು ಜೊತೆಗೆ ಮರಕಡಿದು ಅಕ್ರಮವಾಗಿ ಸಾಗಿಸಿದ್ದಾರೆಂದು ಸ್ಮಾರ್ಟ ಸಿಟಿ ಎಂಡಿ ವಿರುದ್ಧ ಸೆಕ್ಷೆನ್ 420, 427, 447ಐಪಿಸಿ ಅಡಿ ಪ್ರಕರಣ ದಾಖಲು ಮಾಡಲಾಗಿದ್ದು, ಈ ಹಿನ್ನಲೆ ಕಾಮಗಾರಿಯನ್ನ ಅರ್ಧಕ್ಕೆ ಸ್ಥಗಿತ ಮಾಡಲಾಗಿದೆ. ಆದರೆ ಜಿಲ್ಲೆಯಲ್ಲಿ ಇಂತಹ ಅಕ್ರಮ ಕಾಮಗಾರಿಗಳು ಇದೇ ಮೊದಲಲ್ಲ, ಸಂಬಂಧ ಪಟ್ಟ ಇಲಾಖೆ ಅನುಮತಿ ಪಡೆಯದೇ ಸ್ಮಾರ್ಟ್ ಕಾಮಗಾರಿ ನಡೆಸಿತಾ? ವಿರೋಧದ ನಡುವೆ ಕಾಮಗಾರಿ ನಡೆಸುವ ಹಿಂದಿನ ಉದ್ದೇಶವೇನು? ಎಂದು ಜನ ಪ್ರಶ್ನಿಸುತ್ತಿದ್ದಾರೆ.

Previous articleಯೋಗ ದಿನ – ನೆನಪಿಟ್ಟುಕೊಳ್ಳಬೇಕು
Next articleನಾವೆಲ್ಲ ಸೇರಿ ಬ್ರ್ಯಾಂಡ್ ಕರ್ನಾಟಕ ಕಟ್ಟೋಣ!