ಬೆಂಗಳೂರು: ಸಂಪುಟ ಕೈಗೊಂಡಿರುವ ಅಸಂವಿಧಾನಿಕ ನಿರ್ಣಯವನ್ನು ತಿರಸ್ಕರಿಸಿ ಮುಖ್ಯ ಮಂತ್ರಿಗಳ ವಿರುದ್ಧ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಬೇಕೆಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಮೂಡ ‘ಭೂ ಚಕ್ರ’ ದಲ್ಲಿ ಸಿಲುಕಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ರಕ್ಷಿಸಲು ಘನತೆವೆತ್ತ ರಾಜ್ಯಪಾಲರು ಸಿದ್ದರಾಮಯ್ಯ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಮ್ಮತಿ ನೀಡದಂತೆ ರಾಜ್ಯ ಸಚಿವ ಸಂಪುಟ ರಾಜ್ಯಪಾಲರ ವಿರುದ್ಧವೇ ನಿರ್ಣಯ ಹೊರಡಿಸಿರುವುದು ಸಚಿವ ಸಂಪುಟದ ದುರ್ಬಳಕೆ ಆಗುತ್ತದೆ. ಈ ರೀತಿಯಾದ ಸಂವಿಧಾನ ವಿರೋಧಿ ಕ್ರಮಗಳನ್ನು ರಾಜ್ಯಪಾಲರು ತಿರಸ್ಕರಿಸಿ ಇಂತಹ ಪ್ರಕರಣಗಳಲ್ಲಿ ಮುಖ್ಯ ಮಂತ್ರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕೆ ಒಪ್ಪಿಗೆ ನೀಡಲು ಸಂವಿಧಾನದಲ್ಲಿ ಅವಕಾಶವಿದ್ದು, ಸಂಪುಟ ಕೈಗೊಂಡಿರುವ ಅಸಂವಿಧಾನಿಕ ನಿರ್ಣಯವನ್ನು ತಿರಸ್ಕರಿಸಿ ಮುಖ್ಯ ಮಂತ್ರಿಗಳ ವಿರುದ್ಧ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮತಿ ನೀಡಬೇಕೆಂದು ಘನತೆವೆತ್ತ ರಾಜ್ಯಪಾಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.






















