ಅಭಿವೃದ್ಧಿ ನಿಗಮದಿಂದ ಕೊಳ್ಳೆ

0
15

ಬೆಂಗಳೂರು: ಅಮಾಯಕ ಅಧಿಕಾರಿಯೊಬ್ಬರು ಆತ್ಮಹತ್ಯೆಗೀಡಾಗುವಂತೆ ಮಾಡಿರುವುದು ದೌರ್ಭಾಗ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಾಗಿರುವ ರೂ. 187 ಕೋಟಿ ಅವ್ಯವಹಾರವು ಕಾಂಗ್ರೆಸ್ ನ ಮಿಷನ್ ಕಮಿಷನ್ ಗೆ ತೆರೆ ಎಳೆದಿದೆ. ಅಹಿಂದ ಪರ ಎಂದು ಭಾಷಣ ಬಿಗಿಯುವ ಇವರು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಕಲ್ಲು ಹಾಕುವುದಲ್ಲದೇ, ಅಭಿವೃದ್ಧಿ ನಿಗಮದಿಂದ ಕೊಳ್ಳೆ ಹೊಡೆದು, ಅಲ್ಲಿನ ಅಮಾಯಕ ಅಧಿಕಾರಿಯೊಬ್ಬರು ಆತ್ಮಹತ್ಯೆಗೀಡಾಗುವಂತೆ ಮಾಡಿರುವುದು ದೌರ್ಭಾಗ್ಯ. ಈ ಪರಿಯ ಅವ್ಯವಹಾರ ಇಲಾಖೆಯ ಸಚಿವರ ಮೂಗಿನಡಿಯಲ್ಲೇ ನಡೆದರೂ ಅವರಿಗೆ ಅರಿವಿಲ್ಲ ಎಂಬುದು ಹಾಸ್ಯಾಸ್ಪದ ಹಾಗೂ ನಂಬಲಸಾಧ್ಯ. ಬಿ ನಾಗೇಂದ್ರ ಅವರನ್ನು ವಜಾಗೊಳಿಸಿ, ಪಾರದರ್ಶಕ ತನಿಖೆ ಈ ಕೂಡಲೇ ನಡೆಸಬೇಕು ಎಂದಿದ್ದಾರೆ.

Previous articleಪಾತ್ರ ಇದೆಯೂ ಇಲ್ಲವೋ ಎಂದು ನ್ಯಾಯಾಲಯ ನಿರ್ಧಾರ ಮಾಡಲಿದೆ
Next articleಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ ಸಿಐಡಿ ತನಿಖೆಗೆ