೮ ಸಾವಿರ ಕೋಟಿ ಆರೋಪ ಹೊತ್ತಿರುವ ಸಿದ್ದರಾಮಯ್ಯ

0
22
cm

ಹುಬ್ಬಳ್ಳಿ : ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ೮ ಸಾವಿರ ಕೋಟಿ ಭ್ರಷ್ಟಾಚಾರದ ಆರೋಪವಿದ್ದು, ಅದಕ್ಕೆ ಉತ್ತರ ನೀಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ಆರೋಪ ಮಾಡಿದರೇ, ಭ್ರಷ್ಟಾಚಾರ ಕುರಿತಂತೆ ಮಾತನಾಡಬೇಕಾಗುತ್ತದೆ ಎಂದ ಅವರು ನನ್ನ ಮೇಲೆ ಏನಾದರೂ ಭ್ರಷ್ಟಾಚಾರದ ಆರೋಪ ಇದ್ದರೇ ಹೇಳಲಿ ಎಂದು ಸವಾಲ್ ಹಾಕಿದರು.
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನವರು ಹತಾಶೆರಾಗಿದ್ದು, ನೂರು ವರ್ಷದ ಸಂಸ್ಕೃತಿಯನ್ನು ಗಾಳಿಗೆ ತೂರಿದ್ದಾರೆ,ಇನ್ನೂ ಅವರು ಅಧಿಕಾರದ ಮದದಲ್ಲಿ ಇದ್ದಾರೆಂದು ಲೇವಡಿ ಮಾಡಿದ ಅವರು, ಜನರನ್ನು ಗುಲಾಮರಂತೆ ತಿಳಿದುಕೊಂಡಿದ್ದಾರೆಂದು ನುಡಿದರು. ಕಾಂಗ್ರೆಸಿಗರು ವೋಟ್ ಬ್ಯಾಂಕ್ ಅಂತಾ ತಿಳಿದುಕೊಂಡು ಏನ್ ಬೇಕಾದರೂ ಮಾತಾಡಿದ್ರೆ ನಡೆಯುತ್ತೆ ಅನ್ನೋ ಅಮಲಿನಲ್ಲಿ ಅವರಿದ್ದು, ಜನರು ತಕ್ಕ ಪಾಠ ಕಲಿಸಿದ್ದಾರೆಂದರು ಕಿಡಿಕಾರಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ೫೦ ವರ್ಷ ಸಾರ್ವಜನಿಕ ಜೀವನ ಕಳೆದಿದ್ದಾರೆ. ಈ ನಿಟ್ಟಿನಲ್ಲಿ ಅವರು ಕೊನೆಯ ಹಂತದಲ್ಲಿ ಗೌರವಯುತವಾಗಿ ನಡೆದುಕೊಂಡರೇ ಶೋಭೆ ತರುತ್ತೆ, ಇಲ್ಲದಿದ್ದರೆ ಜನ ಇಷ್ಟು ವರ್ಷ ಏನು ಮಾಡಿದ್ದಾರೆ ಕೇಳುತ್ತಾರೆ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಯಾವಾಗ ಯಾವಾಗ ಬೈದ್ರು ಅವಾಗ ಮೋದಿ ವೋಟ್ ಜಾಸ್ತಿ ಆಗಿವೆ. ಮುಖ್ಯಮಂತ್ರಿ ಆದಾಗ ಬೈದರು, ಮೋದಿ ಮೂರು ಬಾರಿ ಮುಖ್ಯಮಂತ್ರಿ ಆದರೂ, ಪ್ರಧಾನಮಂತ್ರಿ ಆಗಿದ್ದಾರೆ. ಜನರ ಭಾವನೆಯನ್ನು ಕೆರಳುಸುತ್ತಿದ್ದಾರೆಂದು ಅವರು ಹಾರಿಹಾಯ್ದರು.
ವಿಕಕ್ಷ ನಾಯಕ ಸಿದ್ದರಾಮಯ್ಯ ನನಗೆ ಟಾರ್ಗೆ ಮಾಡೋದ್ ಸಹಜ. ಯಾಕೆಂದರೆ ಅವರ ಮತಬ್ಯಾಂಕ್ ಛಿದ್ರವಾಗಿದೆ. ಅವರ ಮತಬ್ಯಾಂಕ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅವರ ಕಾಲ ಕೆಳಗೆ ಇದ್ದ ಮತ ಸರಿದು ಹೋಗಿದೆ. ಹಾಗಾಗಿ ನನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಇದೀಗ ಕಾಂಗ್ರೆಸ್ ನ ಡ್ಯಾಂ ಒಡೆದಿದೆ ಎಂದರು.

Previous articleಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನಿರ್ಮಿಸಿದ ಮನೆಯ ಗೃಹ ಪ್ರವೇಶ
Next articleಬಿಜೆಪಿ ಸೋಲಿಸಲು ಕಾಂಗ್ರೆಸ್‌ಗೆ ಬೆಂಬಲ: ಸಿಪಿಐ