ಹೃದಯಾಘಾತದಿಂದ ಯೋಧ ಸಾವು

0
30
ಯೋಧ

ಬೆಳಗಾವಿ: ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಯೋಧನೋರ್ವ ಜಮ್ಮುಕಾಶ್ಮೀರ್‌ದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಹುಕ್ಕೇರಿ ತಾಲೂಕಿನ ಬಡಕುಂದ್ರಿಯ ಶಿವಾನಂದ ಬಾಬು ಸಿರಗಾಂವಿ (೪೨) ಮೃತಪಟ್ಟಿರುವ ಯೋಧನಾಗಿದ್ದು, ಇವರು ಶ್ರೀನಗರ ೫೫ ಆರ್ ಆರ್ ಬೆಟಾಲಿಯಾನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇವರು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಮೃತ ಯೋಧ ಶಿವಾನಂದ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು, ತಾಯಿ ಸೇರಿದಂತೆ ಅಪಾರ ಬಂಧುಗಳನ್ನು ಹೊಂದಿದ್ದರು.
ಮೃತಯೋಧ ಶಿವಾನಂದ ಸಿರಗಾಂವಿ ಅವರ ಪ್ರಾರ್ಥೀವ ಶರೀರವು ಸೆ.೭ರಂದು ಸಂಜೆ ಅಥವಾ ಸೆ.೮ರಂದು ಮೃತದೇಹ ಸ್ವಗ್ರಾಮ ಬಡಕುಂದ್ರಿ ಗ್ರಾಮಕ್ಕೆ ಬರುವ ನಿರೀಕ್ಷೆ ಇದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ತಿಳಿಸಿದ್ದಾರೆ.

Previous articleಬೆಳಗಾವಿಯಲ್ಲಿ ಮತಾಂತರ ಯತ್ನ..!
Next articleಬಿ ವರದಿ ಸ್ವೀಕೃತ: ದೂರುದಾರನಿಗೆ ನೋಟಿಸ್