ಸ್ವಯಂಘೋಷಿತ ಆರ್ಥಿಕ ತಜ್ಞರೇ 15Kg ಅಕ್ಕಿ ಯಾವಾಗ ಕೊಡ್ತೀರಿ?

0
16

ಬೆಂಗಳೂರು : ನರೇಂದ್ರ ಮೋದಿ ಅವರ ಸರ್ಕಾರ 5ಕೆಜಿ ಅಕ್ಕಿ ನೀಡುತ್ತಿದೆ.‌ ಇದರ ಜೊತೆಗೆ ನೀವು ಭಾಷಣ ಮಾಡಿದ 10ಕೆಜಿ ಅಕ್ಕಿ ಸೇರಿಸಿ, ಒಟ್ಟು 15ಕೆಜಿ ಅಕ್ಕಿ ಯಾವಾಗ ಕೊಡ್ತೀರಿ? ಎಂದು ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ನಳೀನ್ ಕುಮಾರ್ ಕಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಪ್ರಶ್ನಿಸಿದ್ದಾರೆ, ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅವರು “ರಾಜ್ಯದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುತ್ತೇವೆಂದು ಕಂಡ ಕಂಡಲ್ಲಿ ಭಾಷಣ ಮಾಡಿದ ಸ್ವಯಂಘೋಷಿತ ಆರ್ಥಿಕ ತಜ್ಞ ಸಿದ್ದರಾಮಯ್ಯರವರೇ, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ 5ಕೆಜಿ ಅಕ್ಕಿ ನೀಡುತ್ತಿದೆ.‌ ಇದರ ಜೊತೆಗೆ ನೀವು ಭಾಷಣ ಮಾಡಿದ 10ಕೆಜಿ ಅಕ್ಕಿ ಸೇರಿಸಿ, ಒಟ್ಟು 15ಕೆಜಿ ಅಕ್ಕಿ ಯಾವಾಗ ಕೊಡ್ತೀರಿ?
ಅಕ್ಕಿ ಬದಲು ಹಣ ನೀಡಿ ಎಂದಾಗ, ಹಣವನ್ನು ತಿನ್ನುವುದಕ್ಕೆ ಆಗುತ್ತಾ ಎಂದು ಉದ್ಧಟತನ ಪ್ರದರ್ಶಿಸಿದ ಸಿದ್ದರಾಮಯ್ಯರವರೇ, ಈಗ ಕೆಜಿಗೆ 34 ರೂಪಾಯಿ ಕೊಡ್ತೇನೆ ಎಂದು Uಟರ್ನ್ ಹೊಡೆದಿದ್ದೀರಿ. ಈಗ ಹಣ ತಿನ್ನೋಕೆ ಆಗುತ್ತಾ? #ATMSarkar ಹೈಕಮಾಂಡಿಗೆ ಹಣ ತಿನ್ನಿಸೋಕೆ ಮಾಡಿದ ಯೋಜನೆಯಾ ಇದು? ಅಕ್ಕಿ ಬದಲಾಗಿ, ಪ್ರತಿ ಕೆಜಿಗೆ 34 ರೂಪಾಯಿ ನೀಡುವುದಾಗಿ ಘೋಷಿಸಿದ ಸಿದ್ದರಾಮಯ್ಯರವರೇ, ಈ ಮೊತ್ತಕ್ಕೆ ಊಟಕ್ಕೆ ಯೋಗ್ಯವಾದ ಅಕ್ಕಿ ರಾಜ್ಯದ ಯಾವ ಗಿರಣಿಯಲ್ಲಿ ಸಿಗುತ್ತದೆ ಎಂದು ಜನರಿಗೆ ತಿಳಿಸಿ. ಇಲ್ಲವಾದಲ್ಲಿ ಯೋಗ್ಯ ಅಕ್ಕಿಗೆ ಯಾವ ದರ ಇರುತ್ತದೋ, ಅಷ್ಟೇ ಮೊತ್ತವನ್ನು ನೀವು ಜನತೆಗೆ ನೀಡಬೇಕು. ಅಕ್ಕಿಯನ್ನು ಹೊಂದಿಸಲು “ಕೈ”ಲಾಗದ ಮುಖ್ಯಮಂತ್ರಿಗಳು, ಕಾಂಗ್ರೆಸ್ ಆಡಳಿತದ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ವಿನಾಕಾರಣ ದೂಷಿಸುತ್ತಿದ್ದಾರೆ. ಕೈಲಾಗದ ಮುಖ್ಯಮಂತ್ರಿಗಳ, ಕೈಲಾಗದ ಗ್ಯಾರಂಟಿಗಳು ಕಾಂಗ್ರೆಸ್‌ ಮುಖವಾಡವನ್ನು ಬಯಲು ಮಾಡಿದೆ ಎಂದು ಟ್ವೀಟ್‌ ಮೂಲಕ ಚಾಟಿ ಬೀಸಿದ್ದಾರೆ

Previous articleರಾಜೀನಾಮೆ ನೀಡಲ್ಲ ಎಂದ ಸಿಎಂ
Next articleಹೊಸಪೇಟೆ: ಆಟೋ-ಲಾರಿ ನಡುವೆ ಭೀಕರ ಅಪಘಾತ