ಚಿತ್ರದುರ್ಗ: ಭೈರಾಪುರ ಬಳಿ ಹಳೇ ಕಾಲದ್ದೆನ್ನಲಾದ ನಾಣ್ಯಗಳು ಪತ್ತೆಯಾಗಿವೆ, ಬಹುತೇಕ ನಾಣ್ಯ ಛತ್ರಪತಿ ಶಿವಾಜಿಯ ಮುಖಚಿತ್ರ ಹೊಂದಿದ್ದು ಹಿಂಬದಿಯಲ್ಲಿ ಕತ್ತಿ-ಗುರಾಣಿ ಚಿತ್ರವಿದ್ದು 1674ಎಂದು ಇಸವಿಯನ್ನ ನಮೂದಿಸಿರುವ ತಾಮ್ರದ ಮಾದರಿಯ ಐವತ್ತಕ್ಕೂ ಹೆಚ್ಚು ನಾಣ್ಯಗಳು ಸೇತುವೆ ಬಳಿ ಪತ್ತೆ ಆಗಿವೆ. ಜಿಲ್ಲೆಯ ಮೊಣಕಾಲ್ಮೂರು ತಾಲ್ಲೂಕಿನ ಭೈರಾಪುರದ ಗ್ರಾಮದಲ್ಲಿರುವ ಸೇತುವೆಯ ಬಳಿ ಕುರಿ ಕಾಯುತ್ತಿದ್ದ ಕುರಗಾಹಿಗಳಿಗೆ ಈ ನಾಣ್ಯಗಳು ದೊರತಿವೆ ಎನ್ನಲಾಗಿದ್ದು, ಸೇತುವೆ ಬಳಿ ಸಿಕ್ಕ ನಾಣ್ಯಗಳನ್ನು ಮನೆಗೆ ಕೊಂಡೊಯ್ದಿರುವ ಜನರು. ಅಧಿಕಾರಿಗಳು, ಸಂಶೋಧಕರು ಪರಿಶೀಲನೆ ನಡೆಸಲಿ ಎಂದು ಗ್ರಾಮದ ಚಿತ್ತಯ್ಯ ಮನವಿ ಮಾಡಿದ್ದಾರೆ.
