ಸುಕುಮಾರ ಶೆಟ್ಟಿ ಉಚ್ಚಾಟನೆ ಪತ್ರ ನಕಲಿ: ಕುಯಿಲಾಡಿ ಸ್ಪಷ್ಟನೆ

0
19

ಉಡುಪಿ: ಬೈಂದೂರಿನ ಹಾಲಿ ಶಾಸಕ ಬಿ. ಸುಕುಮಾರ್ ಶೆಟ್ಟಿ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಸಹಿ ಇರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದು ಸತ್ಯಕ್ಕೆ ದೂರವಾದ ವಿಷಯ. ಉಚ್ಚಾಟನೆ ಪತ್ರ ನಕಲಿ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ‌ಸುರೇಶ ನಾಯಕ್ ತಿಳಿಸಿದ್ದಾರೆ. ಅಂಥ ಯಾವುದೇ ರೀತಿಯ ಬೆಳವಣಿಗೆ ಆಗಿರುವುದಿಲ್ಲ ಎಂದವರು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Previous articleಕೇರಳ ಸ್ಟೋರಿ ವೀಕ್ಷಿಸಿದ ಶಾಸಕ ಡಾ. ಭರತ್ ಶೆಟ್ಟಿ
Next articleಖಾಸಗಿ ಬಸ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿ