ಸಂತ ಸೇವಾಲಾಲ್‌ ಮಹಾರಾಜ ಜಯಂತಿ: ದೆಹಲಿಗೆ ವಿಶೇಷ ರೈಲು

0
21
ರೈಲು

ಹುಬ್ಬಳ್ಳಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಫೆ. 26 ಮತ್ತು 27ರಂದು ನಡೆಯಲಿರುವ ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತಿಯಲ್ಲಿ ಪಾಲ್ಗೊಳ್ಳುವ ಮಹಾರಾಜರ ಭಕ್ತಾಧಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನೈಋತ್ಯ ರೈಲ್ವೆ ವಲಯವು ಶ್ರೀ ಸಿದ್ಧರೂಢ ಸ್ವಾಮೀಜಿ ಹುಬ್ಬಳ್ಳಿ-ಹಜರತ್ ನಿಜಾಮುದ್ದೀನ್(ದೆಹಲಿ) ನಡುವೆ ಒಂದು ಟ್ರಿಫ್‌ ವಿಶೇಷ ರೈಲುಗಳನ್ನು(07301/07302) ಓಡಿಸಲು ನಿರ್ಧರಿಸಲಾಗಿದೆ.
ಈ ವಿಶೇಷ ರೈಲು (07301) ಫೆಬ್ರವರಿ 23ರಂದು ಮಧ್ಯಾಹ್ನ 2.30ಕ್ಕೆ ಎಸ್.ಎಸ್.ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಡಲಿದ್ದು, ಫೆಬ್ರವರಿ 25ರಂದು ಶನಿವಾರ ರಾತ್ರಿ 8.20ಕ್ಕೆ ಹಜರತ್ ನಿಜಾಮುದ್ದೀನ್ (ದೆಹಲಿ) ನಿಲ್ದಾಣವನ್ನು ತಲುಪಲಿದೆ.
ಪುನಃ ಹಿಂದಿರುಗುವ ಮಾರ್ಗದಲ್ಲಿ ಫೆ. 28ರಂದು (ರೈಲು ಸಂಖ್ಯೆ 07302) ಹಜರತ್ ನಿಜಾಮುದ್ದೀನ್‌ ನಿಲ್ದಾಣದಿಂದ ಮಧ್ಯಾಹ್ನ 3.45ಕ್ಕೆ ಹೊರಟು, ಮಾರ್ಚ್ 2ರಂದು ಗುರುವಾರ ರಾತ್ರಿ 10.45ಕ್ಕೆ ಎಸ್‌.ಎಸ್‌.ಎಸ್‌ ಹುಬ್ಬಳ್ಳಿ ನಿಲ್ದಾಣಕ್ಕೆ ಬಂದು ಸೇರಲಿದೆ.
ಈ ವಿಶೇಷ ರೈಲು ಎರಡು ಮಾರ್ಗಗಳಲ್ಲಿ ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಗುಂತಕಲ್, ಡೋನ್, ಕರ್ನೂಲ್ ಸಿಟಿ, ಗದ್ವಾಲ್, ಮಹಬೂಬ್‌ನಗರ, ಶಾದ್‌ನಗರ, ಕಾಚಿಗೂಡ, ಸಿಕಂದರಾಬಾದ್, ಲಿಂಗಂಪಲ್ಲಿ, ವಿಕಾರಾಬಾದ್, ತಾಂಡೂರು, ಸೇಡಂ, ವಾಡಿ, ಕಲಬುರಗಿ, ಸೊಲಾಪುರ, ಮನ್ಮಾಡ್, ಭೂಸಾವಲ್‌, ಖಂಡ್ವಾ, ಇಟಾರ್ಸಿ, ರಾಣಿ ಕಮಲಪತಿ, ಬೀನಾ, ವಿರಂಗನಾ ಲಕ್ಷ್ಮೀಬಾಯಿ ಮತ್ತು ಆಗ್ರಾ ಕ್ಯಾಂಟ್ ಈ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.

Previous articleಹುಬ್ಬಳ್ಳಿಯಲ್ಲಿ ಭೀಕರ ಕೊಲೆ
Next articleಶ್ರೀ ಸಿದ್ಧಾರೂಢಮಠ ಧಾರ್ಮಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಗೆ ಸಹಕಾರ: ಮುಖ್ಯಮಂತ್ರಿ