ಶೇ 93 ಅಂಕಗಳಿಸಿದ ಬಾಲ ಮಂದಿರ ವಿದ್ಯಾರ್ಥಿನಿಗೆ ಐಎಎಸ್‌ ಕನಸು

0
111
ಲಕ್ಷ್ಮಿ

ಬಳ್ಳಾರಿ: ತಂದೆ ತಾಯಿ ಇಲ್ಲದೆ ಸರ್ಕಾರಿ ಬಾಲಕಿಯರ ಬಾಲ ಮಂದಿರದ ಲಕ್ಷ್ಮಿ ಶೇ.93.60ರ ಸರಾಸರಿಯಲ್ಲಿ 585 ಅಂಕಗಳಿಸಿ ಎಸ್ ಎಸ್ ಎಲ್ ಸಿ ತೇರ್ಗಡೆ ಆಗಿದ್ದಾಳೆ. ರಾಯಚೂರು ನಗರದಲ್ಲಿ 7 ವರ್ಷ ವಯಸ್ಸಿನಲ್ಲೇ ಅನಾಥ ಮಗುವಾಗಿ ಪತ್ತೆ ಆಗಿದ್ದು, ಬಳ್ಳಾರಿಯ ಬಾಳ ಮಂದಿರಕ್ಕೆ ದಾಖಲು ಮಾಡಲಾಗಿತ್ತು.
ಮೋಕಾ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಅಭ್ಯಾಸ ಮಾಡಿದ ಮಗು ಅತ್ಯುತ್ತಮ ಸಾಧನೆ ತೋರಿದೆ. ಕನ್ನಡ ಭಾಷೆಯಲ್ಲಿ 112,ಇಂಗ್ಲೀಷ್ ನಲ್ಲಿ 95, ಹಿಂದಿಯಲ್ಲಿ 96 ಗಣಿತ ವಿಷ್ಯದಲ್ಲಿ 97, ವಿಜ್ಞಾನ 93, ಸಮಾಜ ವಿಜ್ಞಾನ ವಿಷಯದಲ್ಲಿ 92 ಅಂಕ ಗಳಿಸಿದ್ದಾರೆ. ನಾನು ಐಪಿಎಸ್ ಮಾಡುವ ಗುರಿ ಹೊಂದಿದ್ದೇನೆ. ರೋಹಿಣಿ ಸಿಂಧೂರಿ ಅವರ ರೀತಿ ಅಧಿಕಾರಿ ಆಗುವ ಆಸೆ ಇದೆ ಅನ್ನುತ್ತಾಳೆ ಲಕ್ಷ್ಮಿ.

Previous articleಮುಸ್ಲಿಮರ ಮೀಸಲಾತಿ ರದ್ದು ಪ್ರಕರಣ: ವಿಚಾರಣೆ ಮುಂದಕ್ಕೆ
Next articleಪಾಕ್‌ ಮಾಜಿ ಪ್ರಧಾನಿ ಅರೆಸ್ಟ್‌