‌ಶೆಟ್ಟರ್‌ ರಾಜೀನಾಮೆಗೆ ಮತ್ತೊಂದು ಟ್ವಿಸ್ಟ್

0
25

ರಾಜ್ಯ ರಾಜಕೀಯದಲ್ಲಿ ಭಾರಿ ಸುದ್ದಿಯಾಗಿರುವ ಶೆಟ್ಟರ ರಾಜಕೀಯ ವಿಷಯ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಮಾಜಿ ಸಿಎಂ ಜಗದೀಶ ಶೆಟ್ಟರ ಅವರಿಗೆ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡದಂತೆ ಖುದ್ದು ಕೇಂದ್ರ ಗೃಹ ಸಚಿವರೇ ಕರೆ ಮಾಡಿ ಹೇಳಿದ್ದಾರೆ.
ನಿನ್ನೆ ರಾತ್ರಿಯವರೆಗೂ ಶೆಟ್ಟರ ಮನವೊಲಿಸಲು ಅನೇಕ ರೀತಿಯ ಸರ್ಕಸ್‌ ನಡೆಸಿ ರಾಜ್ಯ, ಕೇಂದ್ರ ನಾಯಕರು ವಿಫಲರಾದರು. ಇಂದು ಮುಂಜಾನೆ ಶಿರಸಿಗೆ ತೆರಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಪಕ್ಷದ ಸದಸ್ಯತ್ವಕ್ಕೂ ರಾಜೀನಾಮೆ ನೀಡುವ ನಿರ್ಧಾರ ಮಾಡಿರುವ ಶೆಟ್ಟರ್‌ ಅವರಿಗೆ ಇಂದು ಅಮಿತ್‌ ಶಾ ಕರೆ ಮಾಡಿ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಡಬೇಡಿ ಎಂದು ಶಾ ಹೇಳಿದ್ದಾರೆ.

Previous articleಶೆಟ್ಟರಗೆ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದ ಶಾಮನೂರು
Next articleಪಕ್ಷೇತರನಾಗಿ ಮಾಡಾಳು ವಿರುಪಾಕ್ಷಪ್ಪ ಪುತ್ರ ಸ್ಪರ್ಧೆ