ಶೆಟ್ಟರ್ ಬಕೆಟ್‌ ಹಿಡಿದು ಸಿಎಂ ಆಗಿದ್ರಾ?

0
16

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದಲ್ಲಿ ಯಾರೊಬ್ಬರನ್ನು ಬಿಟ್ಟು ಕೊಡುವ ಪ್ರಶ್ನೆ ಇಲ್ಲ. ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯವಾಗಿದೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗ ಮಹೇಶ ಟೆಂಗಿನಕಾಯಿಗೆ ಸಮಸ್ಯೆಯಾಗಿದೆ ಎಂದರೆ ಅದು ಒಂದು ಜಾತಿಗೆ ಸಮಸ್ಯೆಯಾಗಿದೆ ಎಂದಲ್ಲ ಎಂದು ಹೇಳುವ ಮೂಲಕ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಪ್ರದೀಪ ಶೆಟ್ಟರ ಅವರು ನೀಡಿದ್ದ ಲಿಂಗಾಯಿತರನ್ನು ಕಡೆಗಣಿಸಲಾಗುತ್ತಿದೆ ಎಂಬ ಹೇಳಿಕೆಯನ್ನು ಶಾಸಕ ಮಹೇಶ ಟೆಂಗಿನಕಾಯಿ ಖಂಡಿಸಿದರು.
ಯಾರೇ ಇರಲಿ; ಸಮಾಜವನ್ನು ಕೇಳಿ ರಾಜಕಾರಣ ಮಾಡುವುದಿಲ್ಲ. ನನಗೆ ಅನ್ಯಾಯವಾಗಿದೆ ಎಂದರೆ ಅದು ಸಮಾಜಕ್ಕೆ ಅನ್ಯಾಯವಾದಂತೆ ಅಲ್ಲ ಎಂದರು.
ರಾಜ್ಯಕ್ಕೆ ಗರಿಷ್ಠ ಮುಖ್ಯಮಂತ್ರಿಗಳನ್ನು ನೀಡಿದ ಏಕೈಕ ಪಕ್ಷ ಬಿಜೆಪಿ. ಅತೀ ಹೆಚ್ಚು ಲಿಂಗಾಯತ ಮುಖಂಡರಿಗೆ ಪಕ್ಷ ಸ್ಥಾನಮಾನಗಳನ್ನು ನೀಡಿದೆ. ಹೀಗಾಗಿ, ಲಿಂಗಾಯತರಿಗೆ ಬಿಜೆಪಿಯಿಂದ ಅಸಮಾಧಾನವಾಗಿದೆ ಎಂಬ ಮಾತಿಗೆ ಅರ್ಥವಿಲ್ಲ ಎಂದರು.
ಏನಾದರೂ ಸಮಸ್ಯೆಗಳು ಇದ್ದಲ್ಲಿ ಅವುಗಳನ್ನು ಪಕ್ಷದ ಚೌಕಟ್ಟಿನಲ್ಲಿ ಕುಳಿತು ನಾವು ಮಾತುಕತೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಈ ಹಿಂದೆ ಜಗದೀಶ ಶೆಟ್ಟರ್ ಅವರನ್ನು ಬಿಜೆಪಿ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಹಾಗಾದರೆ ಅವರೂ ಬಕೆಟ್ ಹಿಡಿದಿದ್ದರು ಎಂದರ್ಥವೇ ಎಂದು ಪ್ರಶ್ನಿಸಿದರು.

Previous articleನಾನು ಕಾಂಗ್ರೆಸ್ ಬಿಡುವುದಿಲ್ಲ
Next articleನನ್ನ ರುಂಡವೂ ಕಾಂಗ್ರೆಸ್‌ಗೆ ಹೋಗಲ್ಲ