ಕರ್ನಾಟಕದ ಬಾಲಕಿ ಪ್ರಧಾನಿ ನರೇಂದ್ರ ಮೋದಿ ಗಮನಸೆಳೆದು ಭಾರಿ ಸುದ್ದಿಯಾಗಿದ್ದಾಳೆ.
ಬಾಲಕಿ ಶಾಲ್ಮಲಿ, ಕೆ.ಎಸ್. ನರಸಿಂಹ್ವಾಮಿಯವರ ಹಾಡಿಗೆ ಸಿಂಥನೈಸರ್ ನುಡಿಸಿದ್ದನ್ನು ಪ್ರಧಾನಿ ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಆಕೆ ನುಡಿಸಿರುವ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಈ ವಿಡಿಯೋ ಪ್ರತಿಯೊಬ್ಬರ ಮುಖದ ಮೇಲೆ ಮುಗುಳುನಗೆ ತರಿಸಬಹುದು. ಅನನ್ಯ ಪ್ರತಿಭೆ ಹಾಗು ಸೃಜನಶೀಲತೆ. ಶಾಲ್ಮಲಿಗೆ ಶುಭಹಾರೈಕೆಗಳು!” ಎಂದು ಹೇಳಿದ್ದಾರೆ.
