ಹುಬ್ಬಳ್ಳಿ : ಮುಂದಿನ 48 ಗಂಟೆಗಳಲ್ಲಿ (21-23, ಜುಲೈ) ಉತ್ತರ ಒಳನಾಡಿನಾದ್ಯಂತ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ.
ಕರಾವಳಿ, ಪಶ್ಚಿಮ ಘಟ್ಟಗಳು ಮತ್ತು ಮಲೆನಾಡು ಶರಗು ಭಾಗದಲ್ಲಿ ಮಳೆ ಮುಂದುವರಿಯಲಿದ್ದು, ಹೆಚ್ಚಿನ ಮಳೆಯಾಗಲಿದೆ. ಇಡೀ ಉತ್ತರ ಒಳನಾಡು ಭಾರೀ ಮೋಡಗಳಿಂದ ಆವೃತವಾಗಿರುತ್ತದೆ ಮತ್ತು ತಂಪಾಗಿರುತ್ತದೆ ಎಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೃಷಿ ಹವಾಮಾನ ವಿಭಾಗದ ಮುಖ್ಯಸ್ಥರಾದ ಆರ್.ಎಚ್. ಪಾಟೀಲ ತಿಳಿಸಿದ್ದಾರೆ.


























