ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಪತನ: ಶೀಘ್ರದಲ್ಲಿ ಡಿಕೆ ಶಿವಕುಮಾರ್ ಮಾಜಿ ಮಂತ್ರಿ

0
14

ಬೆಳಗಾವಿ: ಆಪರೇಷನ್ ಕಮಲ ಆರೋಪ ಮಾಡುತ್ತಿದ್ದಾರೆ. ಏನೇ ಇದ್ದರೂ ದಾಖಲೆ ಬಿಡುಗಡೆ ಮಾಡಲಿ ಎಂದು ಡಿಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಕಿಡಿಕಾರಿದರು.
ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಗ್ಯಾರಂಟಿ ಈಡೇರಿಸಲು ಆಗದಿದ್ದಕ್ಕೆ ಆಪರೇಷನ್ ಕಮಲ ಆರೋಪ ಮಾಡುತ್ತಿದ್ದಾರೆ. ಏನೇ ಇದ್ದರೂ ದಾಖಲೆ ಬಿಡುಗಡೆ ಮಾಡಲಿ, ಡಿ.ಕೆ.ಶಿವಕುಮಾರ್​ರಿಂದಲೇ ಸರ್ಕಾರ ಬೀಳುತ್ತೆ. ಡಿ.ಕೆ.ಶಿವಕುಮಾರ್​ ವಿಪಕ್ಷದಲ್ಲಿದ್ದಾಗ ಕಾಲಿಗೆ ಬೀಳುತ್ತಾ ಓಡಾಡುತ್ತಾನೆ. ಅಧಿಕಾರ ಇದ್ದಾಗ ಎದೆ ಉಬ್ಬಿಸಿಕೊಂಡು ಓಡಾಡ್ತಾನೆ.​ ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಪತನವಾಗಬಹುದು. ಲಾಟರಿ ಮಂತ್ರಿ, ಲಾಟರಿ ಶಾಸಕರಿದ್ದರೆ ಈ ರೀತಿ ಪರಿಸ್ಥಿತಿ ಆಗುತ್ತದೆ. ರಾಜ್ಯದಲ್ಲಿ ಆಪರೇಷನ್ ಕಮಲ ಆಗಲು ಸಾಧ್ಯವಿಲ್ಲ. ನಂಬರ್ ಹೆಚ್ಚು ಬೇಕು, ಮಹಾರಾಷ್ಟ್ರ ಮಾದರಿಯಲ್ಲಿದರೆ ಸರ್ಕಾರ ಬದಲಾಗುವುದು. ಒಂದು ರಾತ್ರಿಯಲ್ಲಿ ಎಲ್ಲವೂ ಬದಲಾಗುವುದು. ಅತೀ ಶೀಘ್ರದಲ್ಲಿ ಡಿಕೆ ಶಿವಕುಮಾರ್ ಮಾಜಿ ಮಂತ್ರಿ ಆಗಲಿದ್ದಾರೆ ಎಂದರು. ಮಾಜಿ ಶಾಸಕರನ್ನು ಸಿಡಿ ಇದೆಯಿದೆ ಎಂದು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ತಕ್ಕ ಪಾಠ ಕಲಿಸುತ್ತೇವೆ.‌ ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹವಸಚಿವ ಡಾ.‌ಜಿ.‌ಪರಮೇಶ್ವರ ಅವರನ್ನು ಭೇಟಿಯಾಗಿ ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಲಾಗುವುದು ಎಂದರು.

Previous articleಮಳವಳ್ಳಿ ಎಂಜಿನಿಯರ್ ಫಾರ್ಮ್ ಹೌಸ್‌ನಲ್ಲಿ ಲೋಕಾಯುಕ್ತ ದಾಳಿ
Next articleಮಂಡ್ಯ ಜಿಲ್ಲೆಯ ಇಬ್ಬರು ಇಂಜಿನಿಯರ್ ಫಾರ್ಮ್ ಹೌಸ್ ಮೇಲೆ ಲೋಕಾ ದಾಳಿ