ಮನವಿ ನೀಡಲು ಬಂದಿದ್ದ ಮಹಿಳೆ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ; ಅರವಿಂದ ಲಿಂಬಾವಳಿ

0
28

ಬೆಂಗಳೂರು: ಮನವಿ ನೀಡಲು ಬಂದ ಮಹಿಳೆ ಮೇಲೆ ಬಿಜೆಪಿ ಮಹದೇವಪುರ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರು ಅನುಚಿತವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, ಸಚಿವರ ದರ್ಪಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಹಿಳೆಯೊಬ್ಬರು ಶಾಸಕರಿಗೆ ಬಳಿಗೆ ಬಂದು ಕಾಗದ ಹಿಡಿದು ಮನವಿ ಪತ್ರ ನೀಡಲು ಬಂದ ವೇಳೆ, ಅರವಿಂದ ಲಿಂಬಾವಳಿ ಇದ್ದಕ್ಕಿದ್ದ ಹಾಗೆ ಮಹಿಳೆ ಕೈಯಲ್ಲಿದ್ದ ಮನವಿ ಪತ್ರ ಕಸಿಕೊಂಡು ಹರಿದು ಹಾಕುತ್ತಾರೆ.

ವರ್ತೂರು ಕೆರೆಯ ಕೆಲವು ಕಡೆ ಒತ್ತುವರೆ ಮಾಡಲಾಗಿದೆ ಎಂದು ಸಮಸ್ಯೆ ಹೇಳಲು ಬಂದ ಮಹಿಳೆಗೆ, ನಿನಗೆ ಮಾನ ಮರ್ಯಾದೆ ಇದೀಯಾ, ನಿನಗೆ ನಾಚಿಕೆ ಆಗಲ್ವಾ ಎಂದು ಏರು ದನಿಯಲ್ಲಿ ದರ್ಪ ತೋರಿದ್ದಾರೆ. ನಂತರ ಮಹಿಳೆಯನ್ನು ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗಿ ಕೂರಿಸಿ ಎಂದು ಅಲ್ಲಿದ್ದ ಪೊಲೀಸರಿಗೆ ಅರವಿಂದ್ ಲಿಂಬಾವಳಿ ತಾಕೀತು ಮಾಡಿದ್ದಾರೆ.

Previous articleತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ
Next articleಮಠದ ಸ್ವಾಮಿಗಳು ಅಂದ್ರೆ ನನಗೆ ದೇವರಿದ್ದಂತೆ : ಕೆ.ಎಸ್. ಈಶ್ವರಪ್ಪ