ಬೀದರ್ : ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ವಡ್ಡನಕೇರಾ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ೩.೧೮ ಗಂಟೆಗೆ ಲಘು ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪನದ ಮೇಲೆ ೨.೪ ರಷ್ಟು ದಾಖಲಾಗಿದೆ. ಯಾವುದೇ ಅವಾಂತರ ಸಂಭವಿಸಿಲ್ಲ. ಭೂಕಂಪದ ತೀವ್ರತೆ ದುರ್ಬಲವಾಗಿದ್ದು ಗಾಬರಿಗೊಳ್ಳುವ ಅಗತ್ಯ ಇಲ್ಲ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿದೆ. ತೀರಾ ಇತ್ತೀಚಿಗೆ ಇದೇ ಗ್ರಾಮದಲ್ಲಿ ಬೆಳಗಿನ ಜಾವ ಎರಡು ಬಾರಿ ಲಘು ಭೂಕಂಪ ಸಂಭವಿಸಿದ್ದುದು ಇಲ್ಲಿ ಉಲ್ಲೇಖನೀಯ.