ಮಣಿಪುರ ಹಿಂಸಾಚಾರ: ವಾಸ್ತವತೆ ತಿಳಿಯಲು ಶೀಘ್ರದಲ್ಲೇ ವೀಕ್ಷಕರ ತಂಡ

0
35

ನವದೆಹಲಿ: ಮಣಿಪುರ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ ಅವರು ಪಕ್ಷದ ಇತರ ನಾಯಕರು ಬುಧವಾರ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಈಶಾನ್ಯ ರಾಜ್ಯದ ಪರಿಸ್ಥಿತಿಯ ಬಗ್ಗೆ ತಿಳಿಸಿದರು. ನಿಯೋಗವನ್ನು ಭೇಟಿ ಮಾಡಿದ ನಂತರ ಖರ್ಗೆ, ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಕಾಂಗ್ರೆಸ್ ವೀಕ್ಷಕರ ತಂಡವನ್ನು ಮಣಿಪುರಕ್ಕೆ ಕಳುಹಿಸಲಿದೆ ಎಂದು ಹೇಳಿದರು.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೀಷಯ ಹಂಚಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರು ನೆಲದ ವಾಸ್ತವತೆಯನ್ನು ತಿಳಿಯಲು ಶೀಘ್ರದಲ್ಲೇ ವೀಕ್ಷಕರ ತಂಡವನ್ನು ಕಳುಹಿಸಲಾಗುವುದು. ಮಣಿಪುರದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ ಮತ್ತು ತೀವ್ರ ದುಃಖಕರವಾಗಿದೆ. ರಾಜ್ಯದಲ್ಲಿ ಸಹಜ ಸ್ಥಿತಿಗೆ ಮರಳಲು ಕೇಂದ್ರ ಸರ್ಕಾರ ಸಾಧ್ಯವಿರುವ ಎಲ್ಲವನ್ನೂ ಮಾಡಬೇಕು. ಶಾಂತಿಯನ್ನು ಖಾತ್ರಿಪಡಿಸುವಲ್ಲಿ ಪ್ರತಿ ಸಮುದಾಯವು ಪಾಲನ್ನು ಹೊಂದಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳೋಣ ಎಂದಿದ್ದಾರೆ.

Previous articleಭಗವಂತನ ಕರುಣೆ
Next articleಮೆಸ್ಕಾಂನವರೇ ಜೂನ್ ಬಿಲ್ ಕೊಡಬೇಡಿ