ಭಾರತ್ ಜೋಡೋ ಯಾತ್ರೆ ಮಾರ್ನಿಂಗ್ ವಾಕ್ ಮಾಡಿದ ಹಾಗೆ

0
31

ಹಾವೇರಿ: ರಾಹುಲ್ ಗಾಂಧಿ ಕಳೆದ 13 ದಿನಗಳಿಂದ ಕರ್ನಾಟಕದಲ್ಲಿ ಭಾರತ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಈ ವೇಳೆ ರಾಜ್ಯದ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ ಎಂಬುದನ್ನು ಮತನಾಡಲಿ. ಇಲ್ಲದಿದ್ದರೆ ಇವರ ಭಾರತ್ ಜೋಡೋ ಯಾತ್ರೆ ಮಾರ್ನಿಂಗ್ ವಾಕ್ ಮಾಡಿದ ಹಾಗೆ ಆಗುತ್ತದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್ ಹೇಳಿದರು.

ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಾಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡ್ತಿದ್ದಾರೆ. ರಾಹುಲ್ ಗಾಂಧಿ ಇಂದು ಬಳ್ಳಾರಿಯಲ್ಲಿ ಭಾಷಣ ಮಾಡಲಿದ್ದಾರೆ. ಅವರು ನಿಜವಾಗಿಯೂ ಕರ್ನಾಟಕದ ಬಗ್ಗೆ ಗೊತ್ತಿದ್ದರೆ ಪೇಪರ್ ನೋಡದೇ ಭಾಷಣ ಮಾಡಲಿ. 13 ದಿನಗಳಿಂದ ಕರ್ನಾಟಕದಲ್ಲಿ ಓಡಾಡ್ತಿದ್ದಾರೆ. ಕರ್ನಾಟಕದ ಬಗ್ಗೆ ಅವರ ವಿಷನ್ ಏನು? ಐ ಕ್ಯೂ ಏನು ಕರ್ನಾಟಕದಲ್ಲಿ ಇದ್ದು ಕರ್ನಾಟಕದ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ? ಮಾತಾಡಲಿ. ಇಲ್ಲದಿದ್ದರೆ ಇವರ ಭಾರತ್ ಜೋಡೋ ಯಾತ್ರೆ ಮಾರ್ನಿಂಗ್ ವಾಕ್ ಮಾಡಿದ ಹಾಗೆ ಆಗುತ್ತದೆ. ವಿಷನ್ ಲೆಸ್ ರಾಹುಲ್ ಗಾಂಧಿ, ಅವರನ್ನು ನೇತಾ ಅಂತ ಯಾರೂ ಒಪ್ಪಿಕೊಳ್ಳಲ್ಲ ಎಂದು ಹೇಳಿದರು.

ಕವಿ ಸರ್ವಜ್ಞ ಸಾಮಾಜಿಕ ಸ್ವಾಸ್ಥ್ಯ ಕಾಪಾಡಿದವರು. ಸಮಾಜದಲ್ಲಿ ಬೇಧ ಭಾವ ತೊಡೆದು ಹಾಕಲು ಶ್ರಮಿಸಿದ್ದು,ಹಳ್ಳಿ ಹಳ್ಳಿ ಓಡಾಡಿ ಜನ ಜಾಗೃತಿ ಮಾಡಿದರು. ಎಲ್ಲರೂ ಒಂದೇ ಅಂತ ಸಾರಿದವರು ಅವರ ಮೂರ್ತಿಗೆ ಇಂದು ಮಾಲಾರ್ಪಣೆ ಮಾಡಿದ್ದು ನನ್ನ ಸೌಭಾಗ್ಯ ಎಂದರು.

2023 ರ ಚುನಾವಣೆ ತಯಾರಿ ಬಹಳ ಚೆನ್ನಾಗಿ ನಡೆದಿದೆ. ನಮ್ಮ ನಾಯಕರಾದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ತಯಾರಿ ನಡೆದಿದೆ.ನರೇಂದ್ರ ಮೋದಿಯವರಿಗೆ ದೇಶದ ಎಲ್ಲಾ ಕಡೆ ಗೌರವ ಸಿಗುತ್ತಿದೆ. ಕರ್ನಾಟಕದ ಜನತೆ ಕೂಡಾ ನರೇಂದ್ರ ಮೋದಿಯವರ ಜೊತೆ ನಿಂತಿದ್ದಾರೆ.
ನರೇಂದ್ರ ಮೋದಿ ನೇತೃತ್ವದಲ್ಲಿ ನಾವು ಈಗಾಗಲೇ ಇತಿಹಾಸ ನಿರ್ಮಿಸಿದ್ದೇವೆ. ಕರ್ನಾಟಕದಲ್ಲಿ ಕೂಡಾ ಗೆಲ್ಲುತ್ತೇವೆ. ಕಾಂಗ್ರೆಸ್ ಸೋಲೋದ್ರಲ್ಲಿ ಇತಿಹಾಸ ನಿರ್ಮಿಸಿದೆ. ಉತ್ತರಖಾಂಡ, ಗೋವಾ, ಮಣಿಪುರ, ಯುಪಿ ಎಲ್ಲಾ ಕಡೆ ಸೋತು ಕಾಂಗ್ರೆಸ್ ನವರು ಇತಿಹಾಸ ನಿರ್ಮಿಸಿದ್ದಾರೆ. ನಾವು ಕರ್ನಾಟಕದಲ್ಲಿಯೂ 150 ಕ್ಕೂ ಹೆಚ್ಚು ಸೀಟು ಗೆದ್ದು ಇತಿಹಾಸ ಸೃಷ್ಟಿಸುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

Previous articleರಾಹುಲ್ ಗಾಂಧಿ ಸ್ವಾಗತಕ್ಕೆ ಸೇರಿದ್ರು ಸಾವಿರಾರು ಜನ
Next articleಹಲಾಲ್ ಗುರುತು ಇರುವ ವಸ್ತು ಖರೀದಿ ಬೇಡ: ಮುತಾಲಿಕ್