ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ

0
16
ವಿಜಯ ಸಂಕಲ್ಪ ಯಾತ್ರೆ

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ‘ವಿಜಯ ಸಂಕಲ್ಪ ಯಾತ್ರೆ’ಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ ನೀಡಿದರು.

ಪಕ್ಷದ ಬಾವುಟವನ್ನು ರಾಜ್ಯದ ನಾಯಕರಿಗೆ ಹಸ್ತಾಂತರಿಸುವ ಮೂಲಕ ‘ರಥಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವಿನ ಗುರಿಯೊಂದಿಗೆ ಬಿಜೆಪಿಯು ರಾಜ್ಯದ ನಾಲ್ಕು ದಿಕ್ಕಿನಿಂದ ರಥಯಾತ್ರೆಯನ್ನು ಆರಂಭಿಸುತ್ತಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿ.ಎಂ.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಆರಗ ಜ್ಞಾನೇಂದ್ರ, ಸುನೀಲ್ ಕುಮಾರ್, ಮಾಜಿ ಸಚಿವ‌ ಈಶ್ವರಪ್ಪ ಸಾಥ್ ನೀಡಿದರು.

Previous articleಸರಿಯಾಗಿ ಕಾರ್ಯನಿರ್ವಹಿಸದ ಟ್ವಿಟರ್‌
Next article‘ಇದು ನನ್ನ ಕೊನೆಯ ಚುನಾವಣೆ’