ನಾಳೆಯಿಂದ ಜನಸಂಕಲ್ಪ ಯಾತ್ರೆ

0
20
ಜನಸಂಕಲ್ಪ ಯಾತ್ರೆ

ಕೇಸರಿ ಅಲೆ ಎಬ್ಬಿಸಲು ಬಿಜೆಪಿ ಮುಂದಾಗಿದ್ದು, ರಾಜ್ಯದಲ್ಲಿ ನಾಳೆಯಿಂದ ಜನಸಂಕಲ್ಪ ಯಾತ್ರೆ ಆರಂಭಿಸುತ್ತಿದೆ. ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಅವರ ನೇತೃತ್ವದಲ್ಲಿ ಯಾತ್ರೆ ಆರಂಭಗೊಳ್ಳಲಿದೆ.
ಅ. 12ರಂದು ವಿಜಯನಗರ, ಕುಷ್ಟಗಿ, 13ರಂದು ಹೂವಿನ ಹಡಗಲಿ, ಸಿರುಗುಪ್ಪದಲ್ಲಿ ಯಾತ್ರೆ ನಡೆಯಲಿದೆ. 18ರಂದು ಔರಾದ್ ಮತ್ತು ಹುಮ್ನಾಬಾದ್, 19ರಂದು ಸುರಪುರ ಮತ್ತು ಕಲಬುರಗಿ ಗ್ರಾಮೀಣ, 23ರಂದು ಚಿತ್ತಾಪುರ ಮತ್ತು ಆಳಂದದಲ್ಲಿ ಯಾತ್ರೆ ನಡೆಯಲಿದ್ದು, ಅಕ್ಟೋಬರ್ 30ರಂದು ಕಲ್ಬುರ್ಗಿಯಲ್ಲಿ ಬೃಹತ್ ಒಬಿಸಿ ಸಮಾವೇಶ ನಡೆಸಲಾಗುತ್ತದೆ.

Previous articleಕನ್ನೇರಿ ಮಠವನ್ನು ಕರ್ನಾಟಕದಲ್ಲಿಯೂ ಸ್ಥಾಪಿಸಲು ಸಿಎಂ ಬೊಮ್ಮಾಯಿ ಆಹ್ವಾನ
Next articleಮೀಸಲಾತಿ ಹೆಚ್ಚಳ, ಸರ್ಕಾರದ ದೊಂಬರಾಟ: ಪ್ರಿಯಾಂಕ್ ಖರ್ಗೆ