ನಾನು ಮುರುಘಾ ಮಠಕ್ಕೆ ಹೋಗ್ತೀನಿ; ಮಾಜಿ ಸಚಿವ ಎಂ.ಬಿ.ಪಾಟೀಲ್

0
41

ತುಮಕೂರು : “ನಾನು ಮುಂದೆನೂ ಮುರುಘಾ ಮಠಕ್ಕೆ ಹೋಗ್ತೀನಿ” ಸಿದ್ದಗಂಗಾ ಮಠದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಚಿತ್ರದುರ್ಗ ಮುರುಘಾ ಮಠದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಕುರಿತಂತೆ ಮಾಧ್ಯಮವರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಚಿತ್ರದುರ್ಗ ಮುರುಘಾ ಮಠಬಹಳ ಐತಿಹಾಸಿಕ ಮಠ. 5 ಸಾವಿರ ವಿರಕ್ತ ಶಾಖಾ ಮಠ ಹೊಂದಿದ್ದಂತಹ ದೊಡ್ಡ ಮಠ. ಅಲ್ಲಿ ಯಾರು ಇರ್ತಾರೆ, ಯಾರು ಇರಲ್ಲ ಅನ್ನೋದು ಮುಖ್ಯವಲ್ಲ. ನಾಳೆ ನಾನು ಚಿತ್ರದುರ್ಗಕ್ಕೆ ಹೋದರೆ ಮುರುಘಾ ಮಠಕ್ಕೆ ಹೋಗ್ತಿನಿ. ಗದ್ದುಗೆಯಲ್ಲಿ ದರ್ಶನ ಮಾಡಿ ಆಶೀರ್ವಾದ ಪಡೆಯುತ್ತೇನೆ ಜಯದೇವ ಸ್ವಾಮಿಗಳು ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಮುರುಘಾ ಮಠಕ್ಕೆ ಎಲ್ಲ ಪಕ್ಷದವರು ಹೋಗಿದ್ದಾರೆ, ಮುಂದೆನೂ ಹೋಗ್ತಾರೆ. ಇತ್ತೀಚೆಗೆ ಯಡಿಯೂರಪ್ಪ, ಅಮಿತ್ ಶಾ, ರಾಹುಲ್‌ ಗಾಂಧಿ ಸೇರಿದಂತೆ ಎಲ್ಲ ಪಕ್ಷದ ನಾಯಕರು ಹೋಗಿದ್ದಾರೆ. ನಾನೂ ಹೋಗಿದ್ದೆ. ಮಠದಲ್ಲಿ ತಂಗಿದ್ದೆ ಎಂದು ತಿಳಿಸಿದರು.

Previous articleಐಟಿ ಕಂಪನಿಗಳಿಂದ ಸಿಎಂಗೆ ಎಚ್ಚರಿಕೆ
Next articleಸಾವಿನಲ್ಲೂ ಒಂದಾದ ವೃದ್ಧ ದಂಪತಿ