ನಮ್ಮನ್ನು ಪಂಚಮಸಾಲಿ ಸಮಾಜದ ವಿರೋಧಿಗಳೆಂದು ಬಿಂಬಿಸಲು ಯತ್ನ: ವಿಜಯೇಂದ್ರ

0
16
ವಿಜಯೇಂದ್ರ

ನನ್ನ ತಂದೆ ಬಿ.ಎಸ್‌. ಯಡಿಯೂರಪ್ಪ ಮತ್ತು ನನ್ನನ್ನು ಪಂಚಮಸಾಲಿ ಸಮಾಜದ ವಿರೋಧಿಗಳು ಎಂದು ಬಿಂಬಿಸುವ ಪ್ರಯತ್ನ ನಡೆದಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಪಂಚಮಸಾಲಿ ಸಮಾಜಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿ ಸಿಗಲು ವಿರೋಧಿಸುತ್ತಿದ್ದಾರೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಯಡಿಯೂರಪ್ಪನವರು ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿಲ್ಲ ಮತ್ತು ಮುಖ್ಯಮಂತ್ರಿ ಬೊಮ್ಮಾಯಿಯವರ ಮೇಲೂ ಒತ್ತಡ ಹೇರಿಲ್ಲ. ಆದರೆ, ಯಾರೋ ತಮ್ಮ ರಾಜಕೀಯ ಲಾಭಕ್ಕೆ ಸ್ವಾಮೀಜಿಯವರ ಮನಸ್ಸು ಕೆಡಿಸಿದ್ದಾರೆ ಎಂದರು.

Previous articleಪೇ ಸಿಎಂ ಅಭಿಯಾನ: ಹೆಸರು ಕೆಡಿಸಲು ಷಡ್ಯಂತ್ರ ಸಿಎಂ ಬೊಮ್ಮಾಯಿ
Next articleಪೊಲೀಸರ ಕ್ಷೀಪ್ರ ಕಾರ್ಯಾಚರಣೆ ಸಿಕ್ಕಿ ಬಿದ್ದ ಮಗು ಕಳ್ಳಿ