ದೋಸೆ ಹಾಕಿದ ರಾಹುಲ್

0
15

ತೆಲಂಗಾಣ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಸ್ತೆ ಬದಿಯ ಉಪಾಹಾರ ಗೃಹದಲ್ಲಿ ದೋಸೆ ಹಾಕಿದ ಘಟನೆ ನಡೆದಿದೆ.


ಕರೀಂನಗರದಿಂದ ಜಗ್ತಿಯಾಲ್‌ಗೆ ಹೋಗುತ್ತಿದ್ದಾಗ ಬಸ್ ನಿಲ್ದಾಣದ ಬಳಿ ಉಪಾಹಾರ ಗೃಹದಲ್ಲಿ ದೋಸೆ ಹಾಕಿದಲ್ಲದೆ ಅಂಗಡಿ ಮಾಲೀಕನಿಗೆ ಕೈಯಾರೆ ತಿನಿಸಿ ತಾವು ತಿಂದು ಜನರೊಂದಿಗೆ ಸಂವಾದ ನಡೆಸಿ ಮಕ್ಕಳಿಗೆ ಚಾಕಲೇಟ್ ವಿತರಿಸಿದ್ದಾರೆ.


ದೋಸೆ ಹಾಕಿದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ, ಈ ಮುಂಚೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮೈಸೂರು ಅರಮನೆ ನಗರಿಯ ಪ್ರಸಿದ್ಧ ಮೈಲಾರಿ ದೋಸೆಯನ್ನು ಸವಿದರು ಅಲ್ಲದೇ, ಅವರು ಅಡುಗೆ ಮನೆಯಲ್ಲಿ ಖುದ್ದು ತವಾ ಮೇಲೆ ದೋಸೆ ಮಾಡಿ ಸಂತೋಷ ವ್ಯಕ್ತಪಡಿಸಿದ್ದರು.

Previous articleರ‍್ಯಾಪಿಡ್​ ರೈಲಿನಲ್ಲಿ ಮೋದಿ
Next articleಕೈಗಾರಿಕಾ ಬೆಳವಣಿಗೆಗಾಗಿ 9 ವಿಷನ್ ಗ್ರೂಪ್‌ಗಳ ರಚನೆ