ದಾಳಿಯ ಹಿಂದೆ ರಾಜಕೀಯ ಪಿತೂರಿ: ಆರ್. ಶಂಕರ್‌

0
28
R Shankar

ಹಾವೇರಿ(ರಾಣೆಬೆನ್ನೂರು): ಚುನಾವಣೆಯಲ್ಲಿ ಟಕೆಟ್‌ ಕೊಟ್ಟರೂ ಸರಿ ಕೊಡದಿದ್ದರೂ ಸರಿ ನಾನಂತೂ ಪಕ್ಷೇತರನಾಗಿ ಸ್ಪರ್ಧೆ ಮಾಡುವುದು ನಿಶ್ಚಿತ ಎಂದು ವಿಧಾನ ಪರಿಷತ್‌ ಸದಸ್ಯ ಆರ್.‌ ಶಂಕರ್‌ ಹೇಳಿದರು.
ವಾಣಿಜ್ಯ ತೆರಿಗೆ ಇಲಾಖೆಯ ದಾಳಿ ನಡೆಸಿರುವ ಕುರಿತು ತಮ್ಮ ರಾಣೆಬೆನ್ನೂರಿನ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಣಿಜ್ಯ ತರಿಗೆ ಅಧಿಕಾರಿಗಳ ದಾಳಿಯ ಹಿಂದೆ ರಾಜಕೀಯ ವಿರೋಧಿಗಳ ಪಿತೂರಿಯಿದೆ. ರಾಜಕೀಯದಲ್ಲಿ ಆರ್.ಶಂಕರ್ ಬೆಳೆಯಲೇಬಾರದು ಎಂಬ ಉದ್ದೇಶದಿಂದ ಈ ರೀತಿಯಾಗಿ ಮಾಡಿದ್ದಾರೆ. ಅಧಿಕಾರಿಗಳು ಕೇಳಿರುವ ದಾಖಲೆಗಳನ್ನು ನೀಡಿದ್ದೇನೆ ಎಂದರು.
ರಾಣೆಬೆನ್ನೂರಿಗೆ ಕಾಲು ಇಟ್ಟಾಗಿನಿಂದ ದಾನ ಧರ್ಮವನ್ನು ಮಾಡುತ್ತಿದ್ದೇನೆ. ನಾನು ದುಡಿದ ಆದಾಯದಲ್ಲಿ ಒಂದು ಭಾಗ ದಾನಧರ್ಮಕ್ಕೆಂದು ಮೀಸಲಿಟ್ಟಿದ್ದೇನೆ. ಇದು ಹಿಂದಿನಿಂದಲೂ ಮಾಡುತ್ತಿದ್ದೇನೆ. ಅದು ಬಿಟ್ಟು ಚುನಾವಣೆ ಇದೆ ಎಂದು ಜನರಿಗೆ ಕೊಡುತ್ತಿಲ್ಲ. ಈ ಕುರಿತು ಯಾವ ದೇವರ ಮೇಲಾದರೂ ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದ

Previous articleಪ್ರಜಾಧ್ವನಿಗೆ ಮಳೆ ಅಡ್ಡಿ
Next articleಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆ