ದಾಖಲೆ ಇಟ್ಟುಕೊಂಡು ಮೇಲುಕೋಟೆಗೆ ಬನ್ನಿ: ಸಂಸದೆ ಸುಮಲತಾ ಸವಾಲು

0
22
ಸುಮಲತಾ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಕಮಿಷನ್‌ ಪಡೆದಿರುವುದಾಗಿ ಕೆಲ ಶಾಸಕರು ಮಾಡಿರುವ ಆರೋಪಕ್ಕೆ ಸಂಸದೆ ಸುಮಲತಾ ಬಹಿರಂಗ ಸವಾಲು ಹಾಕಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻಆರೋಪ ಮಾಡುವವರು ದಾಖಲೆಗಳನ್ನು ಇಟ್ಟುಕೊಂಡು ಮೇಲುಕೋಟೆಗೆ ಬನ್ನಿ, ಚೆಲುವನಾರಾಯಣಸ್ವಾಮಿ ಮುಂದೆ ಆಣೆ, ಪ್ರಮಾಣ ಮಾಡೋಣ’ ಎಂದು ಸವಾಲು ಹಾಕಿದ್ದಾರೆ.
ನಾನು ಎಂ.ಪಿ ಪ್ರಮಾಣ ಪತ್ರದೊಂದಿಗೆ ಮೇಲುಕೋಟೆಗೆ ಬರುತ್ತೇನೆ. ಶಾಸಕರು ಕೂಡ ಎಂ.ಎಲ್‌.ಎ ಪ್ರಮಾಣ ಪತ್ರದೊಂದಿಗೆ ಮೇಲುಕೋಟೆಗೆ ಬಂದು ಆಣೆ, ಪ್ರಮಾಣ ಮಾಡಲಿ. ಆಗ ಯಾರು ಕಮಿಷನ್‌ ಪಡೆದಿದ್ದಾರೆ ಎಂಬುದು ತಿಳಿಯುತ್ತದೆ. ನಾನು ಕಮೀಷನ್‌ ಪಡೆದು ಕೆಲಸ ಮಾಡಬೇಕಾದ ಅವಶ್ಯಕತೆ ಇಲ್ಲ. ನಾನು ಸಂಸದೆಯಾಗಿ ನನ್ನ ಕೆಲಸ ಮಾಡುತ್ತಿದ್ದೇನೆ ಎಂದರು.

Previous articleಮುಲಾಜಿಲ್ಲದೇ ರಾಜಕಾಲುವೆ ಒತ್ತುವರಿ ತೆರವು: ಸಿಎಂ
Next articleದಡೇಸುಗೂರು ವಿರುದ್ಧ ಮತ್ತೊಂದು ದಾಖಲೆ ಬಿಡುಗಡೆ: ತಂಗಡಗಿ