ಮಂಗಳೂರು: ‘ಸೂಪರ್ ಸ್ಟಾರ್’ ರಜನಿಕಾಂತ್ ರವಿವಾರ ರಾತ್ರಿ ಮಂಗಳೂರಿಗೆ ಆಗಮಿಸಿದ್ದಾರೆ.
ರಜನಿಕಾಂತ್ ನಾಯಕರಾಗಿರುವ ‘ಜೈಲರ್’ ತಮಿಳು ಚಿತ್ರಕ್ಕೆ ಎರಡು ದನ ಚಿತ್ರೀಕರಣ ಮಂಗಳೂರಿಗೆ ಹೊರವಲಯದ ಮೂಡುಶೆಡ್ಡೆ ಪಿಲಿಕುಳದ ಗುತ್ತು ಮನೆಯಲ್ಲಿ ನಡೆಯುತ್ತಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ರಜನಿ ಆಗಮಿಸಲಿದ್ದಾರೆ. ಚಿತ್ರದಲ್ಲಿ ‘ಹ್ಯಾಟ್ರಿಕ್ ಹೀರೊ’ ಶಿವರಾಜ್ ಕುಮಾರ್ ಕೂಡಾ ನಟಿಸುತ್ತಿದ್ದು, ಅವರು ಕೂಡಾ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ರಜನಿಕಾಂತ್ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ವಿಡಿಯೋ ವೈರೆಲ್ ಆಗಿದೆ.