ಗೋವಾದಿಂದ ಬೆಳಗಾವಿಗೆ ಆಗಮಿಸಿದ ಯುದ್ಧವಿಮಾನದ ಬಿಡಿ ಭಾಗಗಳು

0
25

ಬೆಳಗಾವಿ(ನಿಪ್ಪಾಣಿ): ಬೆಳಗಾವಿ ನಾಕಾ ಬಳಿಯ ಛತ್ರಪತಿ ಶಿವಾಜಿ ಉದ್ಯಾನವನದಲ್ಲಿರುವ ಯುದ್ಧ ಸ್ಮಾರಕದಲ್ಲಿ ಪ್ರದರ್ಶನಗೊಳ್ಳಲಿರುವ ಬೃಹತ್ ಆಕಾರದ ವಿಮಾನದ ಬಿಡಿಭಾಗಗಳು ಮಂಗಳವಾರ ನಗರಕ್ಕೆ ಗೋವಾದಿಂದ ಬಂದಿದೆ.
೪ ದೊಡ್ಡ ಲಾರಿಗಳ ಮೂಲಕ ಈ ಯುದ್ಧವಿಮಾನದ ಬಿಡಿಭಾಗಗಳು ಬಂದಿವೆ. ಶೀಘ್ರದಲ್ಲೇ ಈ ವಿಮಾನದ ಬಿಡಿಭಾಗಗಳನ್ನು ಜೋಡಿಸಿ ಬೃಹತ್ ವಿಮಾನವನ್ನು ಪ್ರದರ್ಶನಕ್ಕೆ ಇಡಲಾಗಲಿದೆ. ಇದನ್ನು ನೋಡಲು ನಾಗರಿಕರಲ್ಲಿ ಕುತೂಹಲ ಗರಿಗೆದರಿದೆ.
ಸ್ಥಳೀಯ ವಿದ್ಯಾರ್ಥಿಗಳಿಗೆ, ಯುವಕರಿಗೆ ಇದು ದೇಶದ ಸೇವೆಗಾಗಿ ಪ್ರೇರಣೆ ಸಿಗಲಿ ಎಂಬ ಸದುದ್ದೇಶದಿಂದ ಕೇಂದ್ರ ಸಕಾರವು ಈ ಮ್ಯೂಜಿಯಂಗೆ ಅನುಮತಿ ನೀಡಿ ವಿಮಾನವನ್ನು ನಗರಕ್ಕೆ ಕಳುಹಿಸಿದೆ.

Previous articleಒಂದೇ ಮಳೆಗೆ ಜನ ಜೀವನ ಹೈರಾಣು
Next articleಲಕ್ಷ್ಮೀ ಅರುಣ ಮತದಾನ