ಬೆಂಗಳೂರು: 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯನ್ನು ಪಡೆಯಲು ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಮೊದಲ ದಿನ 55 ಸಾವಿರಕ್ಕೂ ಹೆಚ್ಚು ಮಂದಿ ಗ್ರಾಹಕರು ಅರ್ಜಿ ಸಲ್ಲಿಸಿದ್ದರು, ಇಂದು ಎರಡನೇ ದಿನಕ್ಕೆ ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಕೆ ಆಗಿದ್ದು ಒಟ್ಟು 1,61,958 ಅರ್ಜಿಗಳು ಸ್ವಿಕೃತ ಆಗಿವೆ, ಸೇವಾ ಸಿಂಧು ಪೋರ್ಟಲ್ (https://sevasindhugs.karnataka.gov.in) ಮೂಲಕ ಉಚಿತ ವಿದ್ಯುತ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರು ತಮ್ಮ ಗ್ರಾಹಕ ಐಡಿಯನ್ನು ವೆಬ್ ಪೋರ್ಟಲ್‌ನಲ್ಲಿ ನಮೂದಿಸಬೇಕಾಗಿದ್ದು, ಜೊತೆಗೆ ಆಧಾರ್ ನಂಬರ್ ಹಾಗೂ ಮೊಬೈಲ್ ನಂಬರ್‌ನ್ನು ದಾಖಲಿಸಬೇಕಾಗುತ್ತದೆ.