ಕಾಡಾನೆ ದಾಳಿ: ತೆಂಗು, ಮಾವಿನ ಮರ ನಾಶ

0
35
ತೆಂಗು, ಮಾವಿನ ಮರ

ಮಂಡ್ಯ: ಹಲಗೂರಿನಿಂದ ಮುತ್ತತ್ತಿ ರಸ್ತೆಯಲ್ಲಿರುವ ರಾಯಲ್ ಎಸ್ಟೇಟ್‌ನಲ್ಲಿ ತಡರಾತ್ರಿ ನಾಲ್ಕು ಆನೆಗಳು ಬಂದು ಸುಮಾರು 20 ತೆಂಗಿನ ಮರ ಮತ್ತು 30 ಮಾವಿನ ಮರವನ್ನು ನಾಶ ಮಾಡಿರುವ ಘಟನೆ ಜರುಗಿದೆ.
ರಾಯಲ್ ಫಾರಂನ ಮ್ಯಾನೇಜರ್ ಜಾಕೀರ್ ಮಾತನಾಡಿ, ನಾವು ಸುಮಾರು ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದು ನಮಗೆ ಆನೆಗಳ ಕಾಟ ಹೆಚ್ಚಾಗಿದೆ. ಸುಮಾರು 30 ವರ್ಷಗಳಿಂದ ಬೆಳೆದ ಮಾವಿನ ಮರ ಹಾಗೂ ತೆಂಗಿನ ಮರವನ್ನು ಬಸವನ ಬೆಟ್ಟದಿಂದ ಬಂದಿರುವ ಕಾಡಾನೆಗಳು ಮುರಿದು ನಾಶಪಡಿಸಿ ಲಕ್ಷಾಂತರ ರೂ. ನಷ್ಟ ಮಾಡಿವೆ. ಎಂದು ಅವರು ತಿಳಿಸಿದ್ದಾರೆ.

Previous articleಧಮ್ಮಿದ್ರೆ, ತಾಕತ್ತಿದ್ದರೆ ನನ್ನನ್ನು ಮುಗಿಸಿ: ಗೃಹ ಸಚಿವರಿಗೆ ಸಿದ್ದರಾಮಯ್ಯ ಸವಾಲು
Next articleಕಳ್ಳತನವಾಗಿದ್ದ ಕೆಎಸ್‌ಆರ್‌ಟಿಸಿ ಬಸ್‌ ಪತ್ತೆ