ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಡಿಶುಂ… ಡಿಶುಂ…

0
41
ಚಿಕ್ಕಮಗಳೂರು

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಮಧ್ಯೆಯೇ ಮಾರಾಮಾರಿ ನಡೆದಿದೆ.
ಟಿಕೆಟ್‌ ಹಂಚಿಕೆ ವಿಷಯವಾಗಿ ಬೆಳಗ್ಗೆ ಆರಂಭವಾದ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಕಾರ್ಯಕರ್ತರೇ ಧರ್ಮದೇಟು ನೀಡಿದ್ದಾರೆ. ಆದರೂ ಫೈಟಿಂಗ್ ಮಧ್ಯೆಯೇ ಸಭೆ ನಡೆಸುತ್ತಿದ್ದಾರೆ.
ಯಾರಿಗೆ ಟಿಕೆಟ್ ಕೊಟ್ಟರು ಕೆಲಸ ಮಾಡೋಣ ಎನ್ನುತ್ತಿದ್ದಂತೆ ವಾರ್ ಶುರುವಾಗಿದೆ. ಯಾರಿಗೋ ಅಲ್ಲ, ಅರ್ಜಿ ಹಾಕಿದವರಿಗೆ ಟಿಕೆಟ್ ಎಂದು ರಂಪಾಟ ಮಾಡಿದ್ದಾರೆ. ಒಟ್ಟು ಆರು ಜನ‌ ಕೈ ಮುಖಂಡರು ಅರ್ಜಿ ಹಾಕಿ ಟಿಕೆಟ್‌ಗಾಗಿ‌ ಕಾಯುತ್ತಿದ್ದಾರೆ. ಪರೋಕ್ಷವಾಗಿ ಹೆಚ್.ಡಿ. ತಮ್ಮಯ್ಯ ವಿರುದ್ಧ ಕಾಂಗ್ರೆಸ್ಸಿಗರು ಕಿಡಿಕಾರಿದ್ದಾರೆ.
ಪಕ್ಷ ಒಗ್ಗಟ್ಟಾಗಿ ಹೋಗಲಿ ಎಂದ ಮಂಜೇಗೌಡ ವಿರುದ್ಧ ಕಾರ್ಯಕರ್ತರೇ ರೆಬಲ್ ಆಗಿದ್ದಾರೆ. ಯಾರಿಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡೋಣ ಎಂದ ಮಂಜೇಗೌಡ ವಿರುದ್ಧ ಕಾರ್ಯಕರ್ತರು ತಿರುಗಿ ಬಿದಿದ್ದಾರೆ. ಕೆಪಿಸಿಸಿ ಸಂಯೋಜಕ ಪವನ್ ಮೇಲೆಯೂ ಹಲ್ಲೆ ಮಾಡಿದ್ದಾರೆ.
ಕಾರ್ಯಕರ್ತರ ಮಧ್ಯೆ ವಾಕ್ಸಮರ, ಗಲಾಟೆ, ಥಳಿತ ನಡೆದಿದ್ದು, ನೋಡ ನೋಡುತ್ತಿದ್ದಂತೆ ಕಾಫಿನಾಡ ಕೈ ಕಚೇರಿ ರಣರಂಗವಾಗಿದೆ.

Previous articleಲೋಕಾಯುಕ್ತ ಬಲೆಗೆ ಬಿದ್ದ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ
Next articleಮತ ಎಣಿಕೆ ಕೇಂದ್ರ: ಸ್ಥಳ‌ ಪರಿಶೀಲಿಸಿದ ಜಿಲ್ಲಾಧಿಕಾರಿ