ಇಬ್ರಾಹಿಂ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ

0
18

ಮಂಡ್ಯ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಲವ್ ಬಗ್ಗೆ ಗೊತ್ತಿಲ್ಲ, ಮೊದಲು ಲವ್ ಮಾಡಲು ಹೇಳಿ ಎಂದಿದ್ದ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿಕೆ ಖಂಡಿಸಿ ಮಂಡ್ಯದಲ್ಲಿ ಹಿಂದೂ ಪರ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ಸಂಜಯ ವೃತ್ತದಿಂದ ಆರಂಭವಾದ ಪ್ರತಿಭಟನಾ ರ್ಯಾಲಿ ಜಿಲ್ಲಾಧಿಕಾರಿ ಕಚೇರಿವರೆಗೂ ಸಾಗಿತು. ಯೋಗಿ ಆದಿತ್ಯನಾಥ ವಿರುದ್ಧ ಹೇಳಿಕೆ ನೀಡಿರುವ ಇಬ್ರಾಹಿಂ ನಾಥ ಪರಂಪರೆ ಹಾಗೂ ಒಕ್ಕಲಿಗರಿಗೆ ಅಪಮಾನ ಎಸಗಿದ್ದಾರೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾವಿರಾರು ಹಿಂದೂ ಮತ್ತು ಬಿಜೆಪಿ ಕಾರ್ಯಕರ್ತರು ಇಬ್ರಾಹಿಂ ವಿರುದ್ಧ ಧಿಕ್ಕಾರ ಕೂಗುತ್ತ ಹೆಜ್ಜೆ ಹಾಕಿದ್ರು. ಸಿಎಂ ಇಬ್ರಾಹಿಂ ಪ್ರತಿಕೃತಿಗೆ ಚಪ್ಪಲಿಯಿಂದ ಒದ್ದು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ಐವರು ಪುರುಷರಿಗೆ ಬುರ್ಖಾ ತೊಡಿಸಿ, ಇವರು ಇಬ್ರಾಹಿಂ ಅವರ ಪತ್ನಿಯರು ಎಂದು ಬೋರ್ಟ್ ಹಾಕುವ ಮೂಲಕ ವ್ಯಂಗ್ಯ ಮಾಡಿದರು.

Previous articleನನ್ನ ರಕ್ತವೇ ಕಾಂಗ್ರೆಸ್, ನಾನು ಕಾಂಗ್ರೆಸ್ ಪಕ್ಷ ಸೇರುತ್ತೇನೆ: ಎಚ್. ವಿಶ್ವನಾಥ
Next articleದಿಕ್ಕು ದೆಸೆವಿಲ್ಲದ ಕಾಂಗ್ರೆಸ್‌ನ ಬಸ್ ಯಾತ್ರೆ: ಬಿ. ಶ್ರೀರಾಮುಲು ಟೀಕೆ