ಎಲ್ಲ ಜಾತಿಗೂ ಸಿಎಂ ಸ್ಥಾನ ಕೊಡಲು ಆಗುವುದಿಲ್ಲ

0
26

ಕುಷ್ಟಗಿ: ಎಲ್ಲ ಜಾತಿಗೂ ಸಿಎಂ ಸ್ಥಾನ ಕೊಡಲು ಆಗುವುದಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಜಾತಿಯವರೂ ತಮ್ಮವರು ಮುಖ್ಯಮಂತ್ರಿಯಾಗಲಿ ಎಂದು ಅಭಿಮಾನದಿಂದ ಹೇಳುತ್ತಾರೆ. ಆದರೆ, ಎಲ್ಲ ಜಾತಿಗೂ ಸಿಎಂ ಸ್ಥಾನ ಕೊಡಲು ಆಗುವುದಿಲ್ಲ ಎಂದರು.
ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ಕೊಡದೆ ಪಕ್ಷದಲ್ಲಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಯಾರಿಗೆ ಕೊಡಬೇಕು ಎಂಬುದು ಶಾಸಕಾಂಗ ಪಕ್ಷ ಹಾಗೂ ಹೈಕಮಾಂಡ್‌ ನಿರ್ಧಾರಕ್ಕೆ ಬಿಟ್ಟ ವಿಷಯ ಎಂದರು.

Previous articleಅಂಗರಕ್ಷಕನಿಂದ ಶೂ ಕಟ್ಟಿಸಿಕೊಂಡ ಸಚಿವ
Next articleದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರು-ಭಗತ್ ಕಿ ಕೋಠಿ ನಡುವೆ ವಿಶೇಷ ರೈಲುಗಳ ಸಂಚಾರ