ಅಕ್ಕಿ ಸಿಗದಿರೋದಕ್ಕೆ ರಾಜ್ಯ ಬಿಜೆಪಿ ನಾಯಕರೇ ಕಾರಣ‌

0
15

ಹುಬ್ಬಳ್ಳಿ: ನಮಗೆ ಅಕ್ಕಿ ಸಿಗದಿರೋದಕ್ಕೆ ರಾಜ್ಯ ಬಿಜೆಪಿ ನಾಯಕರೇ ಕಾರಣ‌ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರಕ್ಕೆ ನಾವೇನು ಉಚಿತವಾಗಿ ಅಕ್ಕಿ ಕೇಳುತಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಹೆಸರು ಬರತ್ತೆ ಎಂದು ಈ ರೀತಿ ಮಾತಾಡ್ತೀದಾರೆ. ನಮ್ಮ ರಾಜ್ಯದ ಬಿಜೆಪಿ ಮುಖಂಡರೇ ಹೇಳಿಕೊಟ್ಟ ಕಾರಣಕ್ಕೆ ಅಕ್ಕಿ ಕೊಡತಿಲ್ಲ. ಇದಕ್ಕೆ ನೇರವಾಗಿ ರಾಜ್ಯ ಬಿಜೆಪಿ ನಾಯಕರೇ ಕಾರಣ ಎಂದರು. ಬಿಜೆಪಿಯವರು ಹೋರಾಟ ಮಾಡ್ತೀವಿ ಅಂತಾರೆ‌. ನಾವು ಅದಕ್ಕೆ ಆಸ್ಪದ ಕೊಡಲ್ಲ, ಆಗಸ್ಟ್ 15ರೊಳಗೆ ನಾವು ಎಲ್ಲ ಗ್ಯಾರಂಟಿ ಅನುಷ್ಠಾನ ಮಾಡುತ್ತೇವೆ ಎಂದರು.
ಸಾರಿಗೆ ಇಲಾಖೆ ಅಶಕ್ತ ಆಗಿಲ್ಲ. ಶಕ್ತಿ ಯೋಜನೆಯಲ್ಲಿ ಕೆಲ ಸಣ್ಣ ಪುಟ್ಟ ದೋಷಗಳಿಗೆ. ಪ್ರಾರಂಭದಲ್ಲಿ ಮಹಿಳೆಯರು ಜಾಸ್ತಿ ಓಡಾಡುತ್ತಿದ್ದಾರೆ. ಒಂದು ಸಾರಿ ಹೋಗಿ ಬಂದವರು, ಮತ್ತೆ ಹೋಗಲ್ಲ. ದಿನಕ್ಕೆ 1ಲಕ್ಷ 56 ಸಾವಿರ ಸೆಡ್ಯೂಲ್ ಅಲ್ಲಿ ಬಸ್ ಓಡಾಡತ್ತೆ. ಕೆಲವು ಗೊಂದಲ ಇವೆ ಎಂದರು.
ನಮ್ಮ ಸಿಬ್ಬಂದಿ ಸೌಜನ್ಯದಿಂದ ವರ್ತನೆ ಮಾಡಬೇಕು. ಸಾರ್ವಜನಿಕರು ಸಹಕರಿಸಬೇಕು. ನಾವು ಈಗಾಗಲೇ ಸಿಬ್ಬಂದಿಗೆ ಸೌಜನ್ಯದಿಂದ ವರ್ತನೆ ಮಾಡುವಂತೆ ಎಚ್ಚರಿಕೆ ಕೊಟ್ಟಿದ್ದೇವೆ ಎಂದರು.

Previous articleಎಕ್ಸ್‌ಪ್ರೆಸ್‌ ವೇನಲ್ಲಿ ಮತ್ತೊಂದು ಭೀಕರ ಅಪಘಾತ: ಯುವಕರಿಬ್ಬರ ದುರಂತ ಸಾವು
Next articleಮಹಿಳಾ ಪ್ರಯಾಣಿಕರ ಲೆಕ್ಕ ತಪ್ಪಿಸುವ ಕೆಲಸ: ಸರ್ಕಾರದ ಬೊಕ್ಕಸಕ್ಕೆ ಹೊರೆ