ʻಅಸ್ಪೃಶ್ಯರು ಎಂದು ತೋರಿಸುವುದೇ ಬಿಜೆಪಿ ಉದ್ದೇಶʼ

0
21
BJP

ಬಿಜೆಪಿಯವರ “ದಲಿತರ ಮನೆ ಊಟ” ಎಂಬ ಕಾರ್ಯಕ್ರಮ ದಲಿತರು ಇನ್ನೂ ಅಸ್ಪೃಶ್ಯರು ಎಂದು ತೋರಿಸುವುದೇ ಆಗಿದೆ ಎಂದು ಕಾಂಗ್ರೆಸ್‌ ಟೀಕಿಸಿದೆ.
ಈ ಕುರಿತಂತೆ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, ದಲಿತರ ಮನೆಗೆ ಹೋದ ಬಿಜೆಪಿ ನಾಯಕರು ಅಸ್ಪೃಶ್ಯತೆ ಆಚರಿಸಿ ಬಂದಿದ್ದಾರೆ. ದಲಿತರ ಮನೆಯ ಊಟ ಅಷ್ಟೇ ಅಲ್ಲ, ಅವರ ಮನೆಯ ತಟ್ಟೆ, ಲೋಟಗಳನ್ನೂ ಅಶುದ್ಧ, ಮೈಲಿಗೆ ಎಂದು ಭಾವಿಸುತ್ತದೆ ಎಂಬುದರಲ್ಲಿ ಅನುಮಾನವಿಲ್ಲ ಎಂದು ಕಿಡಿಕಾರಿದೆ.

Previous articleಚರ್ಮಗಂಟು ರೋಗ ನಿರ್ವಹಣೆಗೆ 13 ಕೋಟಿ ಬಿಡುಗಡೆಗೆ
Next articleಜೆಲ್ಲಿ ಕ್ರಷರ್‌ನಲ್ಲಿ ಸ್ಫೋಟಕ ಸಿಡಿದು ಕಾರ್ಮಿಕ ಸಾವು