ಕುಕ್ಕೆ ಶ್ರೀಕ್ಷೇತ್ರದ ಹರಕೆ ಫಲಿಸಿತೇ? ಕತ್ರಿನಾ ಕೈಫ್ ಬಾಳಲ್ಲಿ ಪುತ್ರೋತ್ಸವ!

0
25

ಬಾಲಿವುಡ್ ನಟಿ ಕತ್ರಿನಾ ಕೈಫ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಟಿ 42ನೇ ವಯಸ್ಸಿನಲ್ಲಿ ತಾಯಿಯಾದ ಸಂಭ್ರಮ ಮತ್ತು ನಟ ವಿಕ್ಕಿ ಕೌಶಲ್ ನಿವಾಸದಲ್ಲಿ ಸಡಗರ ಮನೆ ಮಾಡಿದೆ.ಈ ವಿಚಾರವನ್ನು ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದಂಪತಿ ವಿಶೇಷ ಪೋಸ್ಟ್‌ನ್ನ ಹಂಚಿಕೊಂಡಿದ್ದಾರೆ.

ಗಂಡು ಮಗುವಿಗೆ ತಾಯಿಯಾದ ನಟಿ ಕತ್ರಿನಾ ಕೈಫ್ ಸಾಮಾಜಿಕ ಜಾಲತಾಣದಲ್ಲಿ ಬೇಬಿ ಬಂಪ್ ಫೋಟೊವನ್ನು ಹಂಚಿಕೊಂಡಿದ್ದರು. ಜೊತೆಗೆ ‘ಅಪಾರ ಪ್ರೀತಿ ಮತ್ತು ಕೃತಜ್ಞತೆಯಿಂದ ನಾವು ನಮ್ಮ ಗಂಡು ಮಗುವನ್ನು ಸ್ವಾಗತಿಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ. ಇದು ‘ನಮ್ಮ ಜೀವನದ ಅತ್ಯುತ್ತಮ ಸಂತೋಷದ ದಿನವಾಗಿದೆ. ಮತ್ತು ಕೃತಜ್ಞತೆಯಿಂದ ತುಂಬಿದ ಹೃದಯಗಳೊಂದಿಗೆ ಪ್ರಾರಂಭಿಸುವ ಹಾದಿಯಲ್ಲಿ’ ಎಂದು ದಂಪತಿಗಳು ಬರೆದುಕೊಂಡಿದ್ದರು.

ಇದೇ ಶುಕ್ರವಾರ ಅಭಿಮಾನಿಗಳೊಂದಿಗೆ ಇಬ್ಬರೂ ಪೋಸ್ಟ್‌ನಲ್ಲಿ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ನಟಿ ಕತ್ರಿನಾ ಮತ್ತು ವಿಕ್ಕಿ, ಡಿಸೆಂಬರ್ 2021 ರಲ್ಲಿ ರಾಜಸ್ಥಾನದಲ್ಲಿ ಮದುವೆಯಾಗಿದ್ದರು. ಇದೇ ವರ್ಷ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದರು.

ಇದೇ ಸ್ಥಳಕ್ಕೆ ಹಲವಾರು ಗಣ್ಯರು ಈ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅವರ ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಆಗಿರುವುದನ್ನು ಕಂಡಿದ್ದಾರೆ ಎಂದು ಹೇಳಲಾಗುತ್ತಿದೆ . ನಟಿ ಕತ್ರಿಕಾ ಕೈಫ್‌ ಯಾಗ ಶಾಲೆಯಲ್ಲಿ ಸರ್ಪಸಂಸ್ಕಾರ ಸೇವೆ ಮಾಡಿಸಿದ್ದಾರೆ. ಇಂದು ಮತ್ತು ನಾಳೆ ವಿಶೇಷ ಸೇವೆ ನಡೆಯಲಿದೆ ಎನ್ನಲಾಗಿದೆ.

ಇದೇ ಸ್ಥಳಕ್ಕೆ ಹಲವಾರು ಗಣ್ಯರು ಈ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅವರ ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ಆಗಿರುವುದನ್ನು ಕಂಡಿದ್ದಾರೆ ಎಂದು ಹೇಳಲಾಗುತ್ತಿದೆ . ಇದೀಗ ನಟಿ ಕತ್ರಿನಾ ಕೈಫ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ನಟಿ ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ ಜೀವನದಲ್ಲಿ ಹೂಸ ಬೆರಗು ಮೂಡಿದೆ. ಹಾಗೇ ಅಭಿಮಾನಿಗಳಿಂದ ಮತ್ತು ನಟ,ನಟಿಯರಿಂದ ದಂಪತಿಗಳಿಗೆ ಸಾಮಾಜೀಕ ಜಾಲತಾಣಗಳ ಮೂಲಕ ಶುಭಹಾರೈಕೆ ತಿಳಿಸಲಾಗುತ್ತಿದೆ.

Previous articleಸಿಎಂ 15 ವರ್ಷ ಬೇಕಾದ್ರೂ ಇರ್ತಾರೆ: ಡಿಸಿಎಂ ಡಿಕೆಶಿ
Next article‘ಸುಳ್ಳು ಲೆಕ್ಕ’ ನೀಡಿ ರೈತರಿಗೆ ದ್ರೋಹವೆಸಗಿದ ಜೋಶಿಗೆ ಸಿದ್ದು ಗುದ್ದು!

LEAVE A REPLY

Please enter your comment!
Please enter your name here