ಅಜಯ್ ರಾವ್ ಮತ್ತು ಸ್ವಪ್ನಾ ರಾವ್ ಬೇರೆಯಾಗಲು ತೀರ್ಮಾನಿಸಿದ್ದಾರೆ. ವಿಚ್ಛೇಧನಕ್ಕಾಗಿ ಕನ್ನಡ ಸಿನಿಮಾ ನಟ, ನಿರ್ಮಾಪಕ ಅಜಯ್ ರಾವ್, ಪತ್ನಿ ಸ್ವಪ್ನಾ ರಾವ್ ಕೋರ್ಟ್ ಮೊರೆ ಹೋಗಿದ್ದಾರೆ.
ಶನಿವಾರ ಅಜಯ್ ರಾವ್ ಮತ್ತು ಸ್ವಪ್ನಾ ರಾವ್ ವಿಚ್ಛೇಧನಕ್ಕೆ ಅರ್ಜಿ ಹಾಕಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತು ಅಜಯ್ ರಾವ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ಸಹ ನೀಡಿದ್ದಾರೆ.
10 ವರ್ಷಗಳ ಹಿಂದೆ ಅಜಯ್ ರಾವ್ ಮತ್ತು ಸ್ವಪ್ನಾ ರಾವ್ ಪ್ರೀತಿಸಿ ವಿವಾಹವಾಗಿದ್ದರು. ಹೊಸಪೇಟೆಯಲ್ಲಿ ವಿವಾಹ ಮಹೋತ್ಸವ ಸರಳವಾಗಿ ನಡೆದಿತ್ತು. ದಂಪತಿಗಳಿಗೆ ಒಬ್ಬಳು ಮಗಳಿದ್ದಾಳೆ.
ಅಜಯ್ ರಾವ್ ಮತ್ತು ಸ್ವಪ್ನಾ ರಾವ್ ಕೆಲವು ದಿನಗಳ ಹಿಂದೆ ಹೊಸ ಮನೆ ಗೃಹ ಪ್ರವೇಶ ಮಾಡಿದ್ದರು. ಸ್ಯಾಂಡಲ್‌ವುಡ್‌ನ ಹಲವು ನಟ, ನಟಿಯರು, ನಿರ್ಮಾಪಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸ್ವಪ್ನಾ ರಾವ್ ದೂರು: ಸದ್ಯದ ಮಾಹಿತಿ ಪ್ರಕಾರ ಸ್ವಪ್ನಾ ರಾವ್ ಅಜಯ್ ರಾವ್ ವಿರುದ್ಧ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ನೀಡಿದ್ದಾರೆ. ಅಲ್ಲದೇ ಪುತ್ರಿ ಸಹ ದೂರು ಕೊಟ್ಟಿದ್ದಾರೆ.
ಪರಸ್ಪರ ಪ್ರೀತಿಸುತ್ತಿದ್ದ ಅಜಯ್ ರಾವ್ ಮತ್ತು ಸ್ವಪ್ನಾ ರಾವ್ 2014ರ ಡಿಸೆಂಬರ್ 18ರಂದು ಹೊಸಪೇಟೆಯಲ್ಲಿ ಆಪ್ತರ ಸಮ್ಮಖದಲ್ಲಿ ವಿವಾಹವಾಗಿದ್ದರು. 2019ರಲ್ಲಿ ದಂಪತಿಗೆ ಹೆಣ್ಣು ಮಗು ಹುಟ್ಟಿತ್ತು.
ಅಜಯ್ ರಾವ್ ತಮ್ಮ ಸಿನಿಮಾಗಳ ಹೆಸರಿನಿಂದ ಸ್ಯಾಂಡಲ್‌ವುಡ್ ಕೃಷ್ಣ ಎಂದು ಕರೆಸಿಕೊಳ್ಳುತ್ತಾರೆ. ಅವರು ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣ-ಲೀಲಾ ಹೆಸರಿನ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.
2003ರಲ್ಲಿ ತೆರೆಗೆ ಬಂದ ‘ಎಕ್ಸ್‌ಕ್ಯೂಸ್ ಮೀ’ ಚಿತ್ರದ ಮೂಲಕ ಅಜಯ್ ರಾವ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ತಾಜ್ ಮಹಲ್, ಪ್ರೇಮ್ ಕಹಾನಿ ಮುಂತಾದ ಚಿತ್ರಗಳಲ್ಲಿ ಅಜಯ್ ರಾವ್ ನಟಿಸಿದ್ದಾರೆ. ಕೆಲವು ದಿನಗಳ ಹಿಂದೆ ಅಜಯ್ ರಾವ್ ನಿರ್ಮಾಣ ಮಾಡಿ, ನಟಿಸಿದ್ದ ಯುದ್ಧಕಂಡ-2 ಸಿನಿಮಾ ಬಿಡುಗಡೆಯಾಗಿತ್ತು.
ಈ ಕುರಿತು ಖಾಸಗಿ ವಾಹಿನಿ ಜೊತೆ ಮಾತನಾಡಿರುವ ಅಜಯ್ ರಾವ್ ಈ ವಿಚಾರ ನನಗೆ ಸಹ ಇದುವರೆಗೂ ತಿಳಿಲ್ಲ ಎಂದು ಹೇಳಿದ್ದಾರೆ. ಪ್ರತಿನಿಧಿ ನಿಮ್ಮ ಪತ್ನಿ ಕೋರ್ಟ್‌ಗೆ ಹೋಗಿದ್ದಾರೆ ಎಂದು ಹೇಳಿದಾಗ. ಹೌದಾ ಈ ಕುರಿತು ನನಗೆ ತಿಳಿದಿಲ್ಲ, ಅವಳನ್ನು ಕೇಳುತ್ತೇನೆ ಎಂದು ಮಾತ್ರ ಚುಟುಕಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಶನಿವಾರ ಸಂಜೆ ಈ ಕುರಿತು ಮಾತನಾಡಿರುವ ಅಜಯ್ ರಾವ್, “ಇದು ನನ್ನ ವೈಯಕ್ತಿಕ ವಿಚಾರ. ನಾವು ಪರಿಹಾರ ಮಾಡಿಕೊಳ್ಳುತ್ತೇವೆ. ನಾವು ಗೌರವಯುತವಾಗಿ ಪರಿಹಾರ ಮಾಡುತ್ತೇವೆ. ಈಗ ನಾನು ಪ್ರತಿಕ್ರಿಯಿಸಿ ನನ್ನ ಮಗಳ ಭವಿಷ್ಯಕ್ಕೆ ತೊಂದರೆ ಆಗುವುದು ಬೇಡ. ನಮ್ಮ ಖಾಸಗಿತನವನ್ನು ಗೌರವಿಸಿ” ಎಂದು ಹೇಳಿದ್ದಾರೆ.