ಉಡುಪಿ: ಡಿಜೆ ಮರ್ವಿನ್ ಕಾರು ಅಪಘಾತಕ್ಕೆ ಬಲಿ

0
31

ಉಡುಪಿ: ಕಾಪು ಸಮೀಪದ ಮೂಳೂರು ಬಳಿ ಶನಿವಾರ ಮುಂಜಾನೆ ಸಂಭವಿಸಿದ ಕಾರು ಅಪಘಾತದಲ್ಲಿ ಯುವ ಡಿಜೆ ಮರ್ವಿನ್ ಮೆಂಡೋನ್ಸಾ (35) ಸಾವನ್ನಪ್ಪಿದ್ದಾರೆ.

ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಇತರ ಮೂವರೊಂದಿಗೆ ಉಡುಪಿಯಿಂದ ಮಂಗಳೂರು ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕಾಪು ಸಮೀಪದ ಮೂಳೂರು ಬಳಿ ನಾಯಿಯೊಂದು ಕಾರಿಗೆ ಅಡ್ಡ ಬಂದಾಗ ಅದನ್ನು ತಪ್ಪಿಸಲು ಯತ್ನಿಸಿದಾಗ ಕಾರು ಪಲ್ಟಿ ಹೊಡೆದು ಅಪಘಾತ ಸಂಭವಿಸಿದೆ.

ಗಾಯಗೊಂಡ ಪ್ರಜ್ವಲ್, ಪ್ರಸಾದ್ ಹಾಗೂ ವಿಘ್ನೇಶ್ ಎಂಬವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Previous articleDharmasthala Mass Burial: ಧರ್ಮಸ್ಥಳ ಕೇಸ್‌, ಮಾಸ್ಕ್ ಮ್ಯಾನ್ ಬಂಧಿಸಿದ ಎಸ್‌ಐಟಿ, ಹೆಸರು ರಿವೀಲ್
Next articleನಮ್ಮ ಮೆಟ್ರೋ ದೊಡ್ಡಬಳ್ಳಾಪುರಕ್ಕೆ: ಸರ್ಕಾರ ಹೇಳಿದ್ದೇನು?

LEAVE A REPLY

Please enter your comment!
Please enter your name here