ಉಡುಪಿ: ಪ್ರಚೋದನಕಾರಿ ಭಾಷಣ ಆರೋಪದಲ್ಲಿ ಹಿಂದೂ ಸಂಘಟನೆ ಮುಖಂಡ ಕಾರ್ಕಳ ಅಜೆಕಾರು ನಿವಾಸಿ ರತ್ನಾಕರ ಅಮೀನ್ ಮಂಗಳವಾರ ಮುಂಜಾನೆ ತಿರುಪತಿ ಯಾತ್ರೆ ಮುಗಿಸಿ ಮರಳುವ ವೇಳೆ ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ಉಡುಪಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟ ಖಂಡಿಸಿ ಉಡುಪಿಯಲ್ಲಿ ನ. 15ರಂದು ನಡೆದ ಪ್ರತಿಭಟನೆಯಲ್ಲಿ ರತ್ನಾಕರ ಅಮೀನ್ ದ್ವೇಷ ಭಾಷಣ ಮಾಡಿರುವುದಾಗಿ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರತ್ನಾಕರ ಅಮೀನ್ ಬಂಧನಕ್ಕೆ ಹಿಂದೂ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದೆ.

























