ಹಿರಿಯ ಪತ್ರಕರ್ತ ಆರ್.ಜಯಕುಮಾರ್ ನಿಧನ

0
63

ಬೆಂಗಳೂರು: ಹಿರಿಯ ಪತ್ರಕರ್ತ ಆರ್.ಜಯಕುಮಾರ್ (64)ಅವರು ಅನಾರೋಗ್ಯದಿಂದ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ಕೊಡಗಿನವರಾದ ಜಯಕುಮಾರ್, ಚಳವಳಿ ಮೂಲಕವೇ ಪತ್ರಕರ್ತರಾಗಿ ರೂಪುಗೊಂಡವರು. ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ಪತ್ರಿಕೆ, ಉದಯ ಟಿವಿ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ರಾಜ್ಯದ ನಾನಾ ಭಾಗದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ವೃತ್ತಿ ಮಾಡಿದ್ದರು. ಎಸ್‌ಎಫ್‌ಐ ಮೂಲಕ ಸಾರ್ವಜನಿಕ ಸೇವೆಗೆ ಬಂದಿದ್ದ ಇವರು, ಎಸ್‌ಎಫ್‌ಐ ರಾಜ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 1981 ರಿಂದ 87 ರವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಶಿಕ್ಷಣದ ಖಾಸಗೀಕರಣ, ಕೋಮುವಾದೀಕರಣದ ವಿರುದ್ಧ ಪ್ರಬಲ ಹೋರಾಟ ಸಂಘಟಿಸಿದ್ದರು ಜನಪರ ಹೋರಾಟದಲ್ಲಿ ಭಾಗವಹಿಸಿದ್ದ ಕಾಮ್ರೆಡ್ ಜಯಕುಮಾರ್ ಅವರು ಇತ್ತೀಚೆಗೆ ʼಗಾಂಧಿ ಮರೆತ ನಾಡಿನಲ್ಲಿʼ ಮತ್ತು ʼಕಾಡು ಹಾದಿಯ ಬೆಳಕಿನ ಜಾಡಿನಲ್ಲಿʼ ಎಂಬ ಎರಡು ಪುಸ್ತಕಗಳನ್ನು ಹೊರತಂದಿದ್ದರು. ಜಯಕುಮಾರ್ ಅವರು ಪತ್ನಿ ಡಾ.ಲೀಲಾ ಸಂಪಿಗೆ, ಪುತ್ರಿ ದೀಪಿಕಾ, ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

Previous articleಚನ್ನಗಿರಿ ಪ್ರಕರಣ: ವೈದ್ಯರ ಪ್ರಾಥಮಿಕ ವರದಿ ಪ್ರಕಾರ ಸಹಜ ಸಾವು
Next articleಡ್ರಗ್ಸ್ ಪ್ರಕರಣದಲ್ಲಿ ಕರ್ನಾಟಕ ಮುಂದೆ ಪಂಜಾಬ್ ಮೀರಿಸಬಹುದು