ಭಯೋತ್ಪಾದಕರ ಮನೆಗೆ ಬುಲ್ಡೋಜರ್ ನುಗ್ಗಿಸಿ

0
12

ಧಾರವಾಡ: ದೆಹಲಿ ಬಾಂಬ್ ಸ್ಫೋಟಕ್ಕೆ ಕಾರಣರಾದ ಭಯೋತ್ಪಾದಕರ ಮನೆಗಳನ್ನು ಬುಲ್ಡೋಜರ್‌ನಿಂದ ನಾಶ ಮಾಡಬೇಕು ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.

ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸ್ಫೋಟದಲ್ಲಿ ಶಾಮೀಲಾದವರಿಗೆ ಬಹಿಷ್ಕಾರ ಹಾಕಬೇಕು. ಪಾಕಿಸ್ತಾನದ ಕೈವಾಡದಿಂದ ಸ್ಫೋಟ ನಡೆದಿದೆ. ಪಾಕಿಸ್ತಾನ ಇರುವವರೆಗೆ ಭಯೋತ್ಪಾದನೆ ಇರುತ್ತದೆ. ಆದ್ದರಿಂದ ಪಾಕಿಸ್ತಾನವನ್ನು ನಿರ್ನಾಮ ಮಾಡಬೇಕು ಎಂದರು.

ದೆಹಲಿಯ ಬಾಂಬ್ ಸ್ಫೋಟ ಅಮಾನವೀಯ ಘಟನೆಯಾಗಿದ್ದು, ಅಮಾಯಕರನ್ನು ಕೊಂದರೆ ಅಲ್ಲಾಹ ಕೂಡ ಕ್ಷಮಿಸುವುದಿಲ್ಲ. ಕೇಂದ್ರ ಸರಕಾರ ಆಂತರಿಕ ಭದ್ರತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದರು.

ಸ್ಫೋಟದಲ್ಲಿ ವೈದ್ಯರ ಪಾತ್ರವಿರುವುದು ದೃಢಪಟ್ಟಿರುವುದರಿಂದ ಮುಸ್ಲಿಮ್ ವೈದ್ಯರನ್ನು ಸಂಶಯದಿಂದ ನೋಡುವಂತಾಗಿದೆ. ಅವರ ಬಳಿ ಚಿಕಿತ್ಸೆಗೆ ತೆರಳಲು ಭಯವಾಗುತ್ತಿದೆ. ಗಡ್ಡ ಬಿಟ್ಟವರನ್ನು ಕಂಡರೆ, ಬುರ್ಖಾಧಾರಿಗಳನ್ನು ಕಂಡರೆ ಭಯೋತ್ಪಾದಕರೆಂಬ ಸಂಶಯ ಮೂಡುತ್ತದೆ. ಮುಸಲ್ಮಾನರು ಕೇಳಿದ್ದಕ್ಕೆ ಪಾಕಿಸ್ತಾನ ಬಿಟ್ಟು ಕೊಡಲಾಗಿದೆ. ನಮ್ಮ ದೇಶದಲ್ಲಿ ಹುಟ್ಟಿ ಬೆಳೆದವರು ಇದೇ ದೇಶಕ್ಕೆ ದ್ರೋಹ ಮಾಡುತ್ತಿದ್ದಾರೆ. ಈ ಬಗ್ಗೆ ಮುಸಲ್ಮಾನ ಮುಖಂಡರು ಗಂಭೀರ ಚಿಂತನೆ ನಡೆಸಬೇಕು ಎಂದರು.

Previous articleಹಿಂಸಾರೂಪಕ್ಕೆ ತಿರುಗಿದ ಕಬ್ಬು ಬೆಳೆಗಾರರ ಹೋರಾಟ: 50ಕ್ಕೂ ಅಧಿಕ ಟ್ರ್ಯಾಕ್ಟರ್‌ಗಳಿಗೆ ಬೆಂಕಿ…!
Next articleಫೋಟೋಗಾಗಿ ವಿದೇಶಿ ಮಹಿಳೆಯರಿಗೆ ಕಿರುಕುಳ: ಮೂವರ ಬಂಧನ

LEAVE A REPLY

Please enter your comment!
Please enter your name here