ಹುಬ್ಬಳ್ಳಿ: ಮೋಹನ್ ಭಾಗವತ್ ಕರೆ ಕೊಟ್ಟರೆ ಕಾಂಗ್ರೆಸ್‌ಗೆ ಏಕೆ‌ ಬ್ಯಾನಿ – ಜೋಶಿ

0
33

ಹುಬ್ಬಳ್ಳಿ: ಬೇರೆ ಧರ್ಮದವರು ಬೇಕಾದಷ್ಟು ಮಕ್ಕಳನ್ನು ಹುಟ್ಟಿಸಿದರೂ ಕಾಂಗ್ರೆಸ್‌ಗೆ ನಡೆಯುತ್ತದೆ. ಹಿಂದೂಗಳಿಗೆ ಮೋಹನ್ ಭಾಗವತ್ ಕರೆ ಕೊಟ್ಟರೆ ಬ್ಯಾನಿ ಆಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿ ಕಾರಿದ್ದಾರೆ‌. ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವಿಬ್ಬರು, ನಮಗೆ ಮೂವರು ಅನ್ನೋ ಮೋಹನ್ ಭಾಗವತ್ ಹೇಳಿಕೆಗೆ ಸಮರ್ಥನೆ ಮಾಡಿಕೊಂಡರು.

ಟಿಎಂಸಿ‌ ಸಂಸದೆ ಮಹುವಾ ಮೈತ್ರ ಅವರಯ ಅಮಿತ್ ಷಾ ವಿರುದ್ಧವಾಗಿ ಟೀಕಿಸಿದ್ದಾರೆ‌. ಕಾಂಗ್ರೆಸ್ ಸಮಾವೇಶದಲ್ಲಿ ಮೋದಿ ಅವರ ತಾಯಿಯ ವಿರುದ್ಧ ಅಶ್ಲೀಲ ಪದ ಬಳಕೆಯಾಗಿದೆ. ಇದು ಅವರ ಮಟ್ಟವನ್ನು ಸೂಚಿಸುತ್ತದೆ.ಅಮಿತ್ ಷಾ ತಲೆ ಕಡಿಯಬೇಕೆನ್ನುತ್ತಾರೆ. ಸೋಲಿನ ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ.‌ ಕಾಂಗ್ರೆಸ್‌ನವರು ಏನೇ ಮಾಡಿದರೂ ಜನ ನಂಬಲ್ಲ ಎಂದರು.

ಹುಬ್ಬಳ್ಳಿಯಲ್ಲಿ ಸಹಿತವಾಗಿ ಅಕ್ರಮ ನುಸುಳುಕೋರರು ಬಂದಿದ್ದಾರೆ. ಅಕ್ರಮ ನುಸುಳಿಕೊರರಿಂದ ನಮ್ಮ ಹಕ್ಕು ಕಸಿಯೋ ಕೆಲಸ ನಡೆದಿದೆ. ದೇಶದಲ್ಲಿ ಅರಾಜಕತೆ ನಡೆಸುತ್ತಿರುವುದರ ವಿರುದ್ಧ ಯುದ್ಧ ನಡೆದಿದೆ. ಆದರೆ ಅಕ್ರಮ ವಲಸಿಗರು ಕಾಂಗ್ರೆಸ್‌ಗೆ ಮತ ಹಾಕ್ತಾರೆ ಅಂತ ವೋಟ್ ಬಚಾವ್ ಹೋರಾಟ ಮಾಡಲಾಗುತ್ತಿದೆ. ಇದು ವೋಟ್ ಬಚಾವ್ ಹೋರಾಟವಲ್ಲ, ನುಸುಳುಕೋರರ ಬಚಾವ್ ಆಂದೋಲನ ಎಂದರು.

ಪ್ರಧಾನಿ ಮೋದಿ ಅವರು ಎರಡು ದಿನ ಚೀನಾ ಪ್ರವಾಸ ಕೈಗೊಂಡಿದ್ದಾರೆ. ಸಮಾವೇಶದ ಹಿನ್ನೆಲೆಯಲ್ಲಿ ಚೀನಾಕ್ಕೆ ಭೇಟಿ ನೀಡಿದ್ದಾರೆ‌. ಭಾರತದಲ್ಲಿ ಸ್ವದೇಶಿ ಮಂತ್ರ ತೆಗೆದುಕೊಂಡು ಹೋಗುವುದು ಮೋದಿ ಅವರ ಗುರಿ‌ಯಾಗಿದೆ. ವಿದೇಶ ವ್ಯವಹಾರಗಳ ವಿಚಾರದಲ್ಲಿ ಸಂಬಂಧಿಸಿದವರು ಪ್ರತಿಕ್ರಿಯಿಸುತ್ತಾರೆ‌ ಎಂದು ಹೇಳಿದರು.

Previous articleಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌: ಸಾಯಿರಾಜ್ ದಾಖಲೆ
Next articleಚಳಿಯಿದೆ, ದಿಂಬು-ಬ್ಲಾಂಕೆಟ್ ನೀಡಿ: ಕೋರ್ಟ್‌ಗೆ ದರ್ಶನ ಮನವಿ

LEAVE A REPLY

Please enter your comment!
Please enter your name here