ದಾವಣಗೆರೆ: ಕಾಂಗ್ರೆಸ್ ಸೋಲಿಗೆ ಕಾರಣ ಬಿಚ್ಚಿಟ್ಟ ಈಶ್ವರಪ್ಪ

0
49

ದಾವಣಗೆರೆ: ಕಾಂಗ್ರೆಸ್ಸಿನವರು ಒಂದು ರೀತಿಯಲ್ಲಿ ಮುಸ್ಲಿಮರಿಗೆ ಹುಟ್ಟಿದವರಂತೆ ಆಡುತ್ತಿದ್ದು, ಹೀಗೆ ಮುಸ್ಲಿಮರನ್ನು ಅತಿಯಾಗಿ ಓಲೈಕೆ ಮಾಡಿದ ಕಾಂಗ್ರೆಸ್ ಇಡೀ ದೇಶದಲ್ಲೇ ಸೋಲು ಕಂಡಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹರಿಹಾಯ್ದಿದ್ದಾರೆ.

ಚನ್ನಗಿರಿ ತಾಲೂಕಿನ ಮರಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರಿನಲ್ಲಿ ಮುಸ್ಲಿಮರು ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ್ದರೂ ಕ್ರಮವಿಲ್ಲ. ಪಾಕಿಸ್ತಾನ ಜಿಂದಾಬಾದ್ ಅಂದವರ ವಿರುದ್ಧವೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.

ಇಡೀ ರಾಜ್ಯದಲ್ಲಿ ಹಿಂದೂ ಸಮಾಜ ಒಂದಾಗಿರುವುದಕ್ಕೆ ಇತ್ತ ಕಾಂಗ್ರೆಸ್ ಸರಕಾರಕ್ಕೂ ಸಮಾಧಾನವಿಲ್ಲ, ಅತ್ತ ಈ ರಾಜ್ಯದ ಮುಸ್ಲಿಮರಿಗೂ ಸಮಾಧಾನವಿಲ್ಲ. ರಾಜ್ಯದಲ್ಲಿ ಗಣೇಶೋತ್ಸವಗಳನ್ನು ಮಾಡಬೇಕೋ ಅಥವಾ ಬೇಡವೋ ಕಾಂಗ್ರೆಸ್ ಸರಕಾರ ಹೇಳಿ ಬಿಡಲಿ ನೋಡೋಣ. ಪಾಕಿಸ್ತಾನ ಜಿಂದಾಬಾದ್ ಅನ್ನೋರನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ ಸರಕಾರವು ಭಾರತ್ ಮಾತಾ ಕೀ ಜೈ ಘೋಷಣೆ ಮಾಡಬೇಕೋ ಅಥವಾ ಬೇಡವೋ ಎಂಬುದನ್ನೂ ಸ್ಪಷ್ಟ ಮಾಡಿ ಬಿಡಲಿ ಎಂದು ಸವಾಲು ಹಾಕಿದರು.

ಮಸೀದಿಗಳ ಮುಂದೆ ಗಣೇಶ ಮೆರವಣಿಗೆ ಸಾಗುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲವೆಂದು ಕಾಂಗ್ರೆಸ್ ಸರಕಾರ ಹೇಳಿ ಬಿಡಲಿ. ರಾಜ್ಯಾದ್ಯಂತ ಹಳ್ಳಿಹಳ್ಳಿಗಳ ಪ್ರತಿ ಗಣೇಶೋತ್ಸವದಲ್ಲೂ ಯುವಕರು ಹಿಂದುತ್ವದ ಬಗ್ಗೆ ಜಾಗೃತರಾಗಿದ್ದಾರೆ. ನಾನಾಗಲೀ, ಬಸನಗೌಡ ಪಾಟೀಲ ಯತ್ನಾಳ್ ಆಗಲಿ ಹಿಂದುತ್ವದ ಪರ ಇಲ್ಲಿಗೆ ಬಂದಿದ್ದೇವೆ. ಇಡೀ ರಾಜ್ಯದಲ್ಲಿ ಹಿಂದುತ್ವದ ಪರ ನಿಲ್ಲುತ್ತೇವೆ. ಎಲ್ಲಿವರೆಗೆ ಮುಸಲ್ಮಾನರ ಬೆಂಬಲಿತ ಕಾಂಗ್ರೆಸ್ ಸರಕಾರ ರಾಜ್ಯದಿಂದ ತೊಲಗುವುದಿಲ್ಲವೋ ಅಲ್ಲಿವರೆಗೆ ಹಿಂದುತ್ವದ ಪರ ನಮ್ಮ ಹೋರಾಟ ಇದ್ದೇ ಇರುತ್ತದೆ ಎಂದು ಅವರು ಹೇಳಿದರು.

ಹಿಂದೂಗಳು, ಹಿಂದೂ ಮುಖಂಡರು, ಕಾರ್ಯಕರ್ತರ ಮೇಲೆ ಕೇಸ್ ಹಾಕುತ್ತಿದ್ದರೂ ಸುಮ್ಮನಿರುವ ಬಗ್ಗೆ ಜನರು ನಮಗಲ್ಲ ಬಿಜೆಪಿ ನಾಯಕರಿಗೆ ಛೀಮಾರಿ ಹಾಕುತ್ತಿದ್ದಾರೆ. ಹಿಂದೂ ಪರ ಇದ್ದವರಿಗೆ ಎಫ್‌ಐಆರ್ ಹಾಕುತ್ತಿದ್ದರೂ ಯಾಕೆ ಸುಮ್ಮನಿದ್ದೀರಿ ಅಂತಾ ನೀವೇ ಬಿಜೆಪಿ ನಾಯಕರಿಗೆ ಕೇಳಿ. ನಾವೆಲ್ಲಾ ಕಡೆ ಸ್ಪಷ್ಟವಾಗಿ ಹಿಂದೂ ಮುಖಂಡರು, ಕಾರ್ಯಕರ್ತರ ಮೇಲೆ ಎಫ್ಐಆರ್ ಹಾಕಿದ್ದನ್ನು ವಿರೋಧಿಸಿದ್ದೇವೆ. ಮುಸ್ಲಿಮರ ಮೆರವಣಿಗೆಯಲ್ಲಿ ಹತ್ತಾರು ಡಿಜೆ ಬಳಸಿದ್ದಕ್ಕೆ ನಾನೇ ಎಷ್ಟೋ ಎಸ್ಪಿಗಳಿಗೆ ಮಾತನಾಡಿದ್ದೇನೆ ಎಂದರು.

Previous articleಆತ್ಮನಿರ್ಭರ ಭಾರತ, ಆನ್‌ಲೈನ್, ಡಿಜಿಟಲ್‌ನಿಂದ ತಗ್ಗಿದ ನಿರುದ್ಯೋಗ
Next articleಹೂವಿನ ಬಾಣ ಬಿಟ್ಟು ಸಿನಿಮಾ ಚಾನ್ಸ್‌ ಗಿಟ್ಟಿಸಿದ ವೈರಲ್‌ ಹುಡ್ಗಿ!

LEAVE A REPLY

Please enter your comment!
Please enter your name here