ದಾವಣಗೆರೆ: ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದ ದುಷ್ಕರ್ಮಿ ಬಂಧನ

0
18

ದಾವಣಗೆರೆ: ನಗರದ ಆನೆಕೊಂಡ ಬಸವೇಶ್ವರ ದೇವಸ್ಥಾನದಿಂದ ಕಲ್ಲೇಶ್ವರ ಮಿಲ್ ಕಡೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕರಿಗೆ ಭಯ ಉಂಟು ಮಾಡುವಂತೆ ಲಾಂಗ್ ಹಿಡಿದುಕೊಂಡು ಓಡಾಡುತ್ತಿದ್ದ ದುಷ್ಕರ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಟಿಪ್ಪು ನಗರದ ಅಬ್ದುಲ್ ಸಮದ್ (28 ವರ್ಷ) ಬಂಧಿತ ಆರೋಪಿೈಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಆಯುಧವನ್ನು ಹಿಡಿದುಕೊಂಡು ಅಶಾಂತಿಯನ್ನುಂಟು ಮಾಡುವಂತಹ ವೀಡಿಯೋ ಹರಿದಾಡಿತ್ತು. ಸದರಿ ವೀಡಿಯೋ ಆಧರಿಸಿ ಆರ್.ಎಂ.ಸಿ ಠಾಣೆ ಪೊಲೀಸರು ಅಬ್ದುಲ್ ಸಮದ್‌ನನ್ನು ಬಂಧಿಸಿದ್ದಾರೆ.

ಸಾರ್ವಜನಿಕರಿಗೆ ಭಯ ಉಂಟು ಮಾಡುವಂತೆ ಆಯುಧ ಹಿಡಿದು ಅಡ್ಡಾಡುವುದು ಹಾಗೂ ಅಶಾಂತಿ ಉಂಟು ಮಾಡುವಂತೆ ವರ್ತಿಸುವುದು ಕಾನೂನುಬಾಹಿರವಾಗಿದೆ. ಅಂತಹ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ಇನ್ನು, ಕಾರ್ಲ್ ಮಾರ್ಕ್ಸ್ ನಗರದಲ್ಲಿ ಫ್ಲೆಕ್ಸ್ ಕಟ್ಟುವ ವಿಚಾರದಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಈವರೆಗೆ 15 ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ.

Previous articleದಾವಣಗೆರೆ: ಸಮೀಕ್ಷೆಗೆ ಗೈರು – ಶಿಕ್ಷಕರು ಸೇರಿದಂತೆ ಮೂವರು ಸಿಬ್ಬಂದಿಗಳ ಅಮಾನತು
Next articleಮನ್ ಕೀ ಬಾತ್: ಸ್ವದೇಶಿ ಅಭಿಯಾನ ನಿಮ್ಮ ಶಾಪಿಂಗ್ ಮಂತ್ರವಾಗಲಿ

LEAVE A REPLY

Please enter your comment!
Please enter your name here