ಧರ್ಮಸ್ಥಳ ಬುರುಡೆ ಪ್ರಕರಣ: ಚಿನ್ನಯ್ಯನ ಜಾಮೀನು ಅರ್ಜಿ ವಿಚಾರಣೆ – ಆದೇಶ ಕಾಯ್ದಿರಿಸಿದ ಕೋರ್ಟ್

0
19

ಬೆಳ್ತಂಗಡಿ : ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ಬುರುಡೆ ತಂದ ಪ್ರಕರಣದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು. ಈತನ ಜಾಮೀನು ಅರ್ಜಿ ಬೆಳ್ತಂಗಡಿ ಕೋರ್ಟ್ ನಲ್ಲಿ ಸೆ.12 ರಂದು ವಿಚಾರಣೆಗೆ ಬಂದಿದ್ದು. ಈ ನಡುವೆ ಎಸ್.ಐ.ಟಿ ಪೊಲೀಸರು ಜಾಮೀನು ನೀಡದಂತೆ ಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.

ಇಂದು ವಾದ ವಿವಾದ ನಡೆಸಿದ ಸರಕಾರಿ ವಕೀಲರು ಮತ್ತು ಚಿನ್ನಯ್ಯ ಪರ ಉಚಿತ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲರು. ಸದ್ಯ ಪ್ರಕರಣದ ಜಾಮೀನು ಅರ್ಜಿಯ ಅದೇಶವನ್ನು ನ್ಯಾಯಾಧೀಶರಾದ ವಿಜಯೇಂದ್ರ.ಟಿ.ಹೆಚ್ ಮುಂದಿನ ಸೆ.16 ಕ್ಕೆ ಕಾಯ್ದಿರಿಸಿದ್ದಾರೆ.

ಬುರುಡೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾದ ಪ್ರದೀಪ್: ಬುರುಡೆ ಪ್ರಕರಣ ಸಂಬಂಧ ಕೋರ್ಟ್‌ನಲ್ಲಿ ಬುರುಡೆ ಬಗ್ಗೆ ಸಾಕ್ಷಿ ಹೇಳಿಸಲು ಎಸ್.ಐ.ಟಿ ಅಧಿಕಾರಿಗಳು ಬಂಟ್ವಾಳದ ಪ್ರದೀಪ್ ಎಂಬಾತನನ್ನು ಬೆಳ್ತಂಗಡಿ ಕೋರ್ಟ್ ಮುಂದೆ ಹಾಜರುಪಡಿಸಿದ್ದಾರೆ. ಬೆಳ್ತಂಗಡಿ ಪ್ರಧಾನ ವ್ಯವಹಾರಿಕ ನ್ಯಾಯಧೀಶರಾದ ಸಂದೇಶ್ ಮುಂದೆ ಸೆ.12 ರಂದು 3 ಗಂಟೆಗೆ ಬುರುಡೆ ಪ್ರಕರಣದಲ್ಲಿ ಸೌಜನ್ಯ ಮಾವ ವಿಠಲ್ ಗೌಡನ ಜೊತೆ ಸಹಾಯಕನಾಗಿ ಇದ್ದ ಬಂಟ್ವಾಳ ನಿವಾಸಿ ಪ್ರದೀಪ್ ಎಂಬಾತನನ್ನು ಸಾಕ್ಷಿ ಹೇಳಿಸಲು ಎಸ್.ಐ.ಟಿ ಅಧಿಕಾರಿಗಳು ಹಾಜರುಪಡಿಸಿದ್ದಾರೆ.

Previous articleಮಂಡ್ಯ: ಶ್ರೀರಂಗಪಟ್ಟಣ ದಸರಾ 2025, ಲೋಗೋ ಬಿಡುಗಡೆ
Next articleಧರ್ಮಸ್ಥಳ: ಸೆ.14 ರಿಂದ ಭಜನಾ ಕಮ್ಮಟ

LEAVE A REPLY

Please enter your comment!
Please enter your name here